alex Certify
ಕನ್ನಡ ದುನಿಯಾ       Mobile App
       

Kannada Duniya

ಭಯಾನಕ ಕಾಡ್ಗಿಚ್ಚಿನ ನಡುವೆಯೇ ಮಹಿಳೆಗಾಯ್ತು ಹೆರಿಗೆ

ಮಗುವಿನ ಜನನ ಹೆತ್ತವರಿಗೆ ವಿಶಿಷ್ಟ ಅನುಭೂತಿ ನೀಡುವ ಕ್ಷಣ. ಆದ್ರೆ ವೈದ್ಯರಿಗೆ ಅತ್ಯಂತ ಜವಾಬ್ಧಾರಿಯುತ ಸಮಯ. ತಾಯಿ-ಮಗು ಇಬ್ಬರ ಸುರಕ್ಷತೆಯ ಹೊಣೆ ವೈದ್ಯರ ಮೇಲಿರುತ್ತದೆ. ಕ್ಯಾಬ್, ಲಿಫ್ಟ್, ರೈಲ್ವೆ ಸ್ಟೇಶನ್ ನಲ್ಲೇ ಹೆರಿಗೆ ಆಗಿರೋ ಬಗ್ಗೆ ನೀವು ಕೇಳಿರ್ತೀರಾ.

ಇಲ್ಲೊಬ್ಳು ಮಹಿಳೆಗೆ ಬೆಂಕಿ ದುರಂತದ ಸಂದರ್ಭದಲ್ಲೇ ಹೆರಿಗೆ ಆಗಿದೆ. ಸುತ್ತಮುತ್ತ ತೀವ್ರ ಕಾಡ್ಗಿಚ್ಚು ಆವರಿಸಿತ್ತು. ಬೆಂಕಿಯ ಕೆನ್ನಾಲಗೆಗೆ ಸಿಕ್ಕು 17 ಮಂದಿ ಪ್ರಾಣ ಕಳೆದುಕೊಂಡಿದ್ರು. ಯಾವುದೇ ಕ್ಷಣದಲ್ಲಾದ್ರೂ ಆಸ್ಪತ್ರೆಗೆ ಬೆಂಕಿ ತಗುಲುವ ಅಪಾಯವಿತ್ತು.

ಹಾಗಾಗಿ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನೆಲ್ಲ ವೈದ್ಯರು ಬೇರೆಡೆಗೆ ಸ್ಥಳಾಂತರ ಮಾಡುತ್ತಿದ್ರು. ತುಂಬು ಗರ್ಭಿಣಿ ನಿಕೋಲ್ ವ್ಯೂಮ್ ಗೆ ಆಗ ಭಯಂಕರ ಹೆರಿಗೆ ನೋವು. ಬೇರೆಡೆಗೆ ಶಿಫ್ಟ್ ಮಾಡುವಷ್ಟು ಸಮಯ ಕೂಡ ಇರಲಿಲ್ಲ. ಕೊನೆಗೆ ಅಲ್ಲೇ ವೈದ್ಯರು ಅವಳಿಗೆ ಸಿಸೇರಿಯನ್ ಮಾಡಿದ್ದಾರೆ.

ನಿಕೋಲ್ ಮತ್ತಾಕೆಯ ಪತಿ ಮಗ ಜನಿಸಿದ ಸಂಭ್ರಮದಲ್ಲಿದ್ದರು. ಆಗ ಇದ್ದಕ್ಕಿದ್ದಂತೆ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...