alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ಮಡಿಲು ತುಂಬಿದೆ 24 ವರ್ಷಗಳ ಹಿಂದೆ ಹೆಪ್ಪುಗಟ್ಟಿಸಿ ಇಟ್ಟಿದ್ದ ಭ್ರೂಣ

24 ವರ್ಷಗಳ ಹಿಂದೆ ಹೆಪ್ಪುಗಟ್ಟಿಸಿ ಇರಿಸಿದ್ದ ಭ್ರೂಣ ಈಗ ಮಗುವಾಗಿ ಭೂಮಿಗೆ ಬಂದಿದೆ. ಅಮೆರಿಕದ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಇದು ಅತ್ಯಂತ ದೀರ್ಘಾವಧಿವರೆಗೆ ಹೆಪ್ಪುಗಟ್ಟಿಸಿ ಇರಿಸಿದ್ದ ಭ್ರೂಣ ಅಂತಾ ಹೇಳಲಾಗ್ತಿದೆ.

1992ರಲ್ಲಿ ಬೇಬಿ ಎಮ್ಮಾ ವ್ರೆನ್ ಗಿಬ್ಸನ್ ಎಂಬಾಕೆ ಗರ್ಭ ಧರಿಸಿದ್ದಳು. ಆದ್ರೆ ಮಗುವನ್ನು ಹೊಂದಿರಲಿಲ್ಲ, ಬದಲಾಗಿ ಭ್ರೂಣವನ್ನು ಫ್ರೀಜ್ ಮಾಡಿ ಇರಿಸಿದ್ದಳು. ಟೀನಾ ಗಿಬ್ಸನ್ ಎಂಬ 26  ವರ್ಷದ ಮಹಿಳೆ ಸಹಜವಾಗಿ ಗರ್ಭ ಧರಿಸಲು ಸಾಧ್ಯವಿರಲಿಲ್ಲ. ಯಾಕಂದ್ರೆ ಆಕೆಯ ಪತಿ ಬೆಂಜಮಿನ್ ಗೆ ಸಿಸ್ಟಿಕ್ ಫೈಬ್ರೊಸಿಸ್ ಸಮಸ್ಯೆ ಇತ್ತು.

ಹಾಗಾಗಿ 1992ರಲ್ಲಿ ಫ್ರೀಝ್ ಮಾಡಿಟ್ಟಿದ್ದ ಭ್ರೂಣವನ್ನು ಟೀನಾಗೆ ಅಳವಡಿಸಲಾಗಿತ್ತು. ಐವಿಎಫ್ ಮೂಲಕ 2017ರ ಮಾರ್ಚ್ ನಲ್ಲಿ ಭ್ರೂಣವನ್ನು ಟೀನಾಗೆ ಅಳವಡಿಸಲಾಗಿತ್ತು. ನವೆಂಬರ್ 25ರಂದು ಆಕೆಗೆ ಹೆರಿಗೆಯಾಗಿದ್ದು, ಆರೋಗ್ಯವಂತ ಮಗು ಜನಿಸಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...