alex Certify
ಕನ್ನಡ ದುನಿಯಾ       Mobile App
       

Kannada Duniya

ರೆಸ್ಟೋರೆಂಟ್ ನಲ್ಲಿ ಜನಿಸಿದ ಮಗುವಿಗೆ ಸಿಕ್ಕಿದೆ ವಿಶೇಷ ಉಡುಗೊರೆ

ಅಮೆರಿಕದ ಟೆಕ್ಸಾಸ್ ನಲ್ಲಿರುವ ಖ್ಯಾತ ರೆಸ್ಟೋರೆಂಟ್ ಆದಂತಾ ಚಿಕ್ – ಫಿಲ್ – ಎ ಸಾಮಾಜಿಕ ಜಾಲತಾಣದಲ್ಲೀಗ ಭಾರೀ ಸಂಚಲನ ಸೃಷ್ಟಿಸಿಬಿಟ್ಟಿದೆ. ನಾವು ಕೇವಲ ಆಹಾರವನ್ನಷ್ಟೇ ಪೂರೈಕೆ ಮಾಡೋದಿಲ್ಲ. ಮಗುವಿನ ಜನ್ಮ ಕಾಲದಲ್ಲೂ ನಾವು ಮಾನವೀಯ ನೆಲೆಗಟ್ಟಿನಲ್ಲಿ ಮಾಡಬೇಕಾದ ಸಹಾಯ ಮಾಡ್ತಿವಿ ಅನ್ನೋ ಸಾಲುಗಳೊಂದಿಗೆ ರೆಸ್ಟೋರೆಂಟ್ ನಲ್ಲಿ ಜನಿಸಿದ ಮಗುವಿನ ಫೋಟೋ ಒಂದನ್ನ ಪೋಸ್ಟ್ ಮಾಡಿದೆ.

ಜುಲೈ 17ರಂದು ನಡೆದ ಘಟನೆಯನ್ನ ತುಂಬಾ ಹೆಮ್ಮೆಯೊಂದಿಗೆ ಚಿಕ್ – ಫಿಲ್- ಎ ರೆಸ್ಟೋರೆಂಟ್ ಪ್ರಪಂಚಕ್ಕೆ ತಿಳಿಸಿದೆ. ರಾಬರ್ಟ್ ಗ್ರಿಫಿನ್ ಎಂಬ ವ್ಯಕ್ತಿ ತುಂಬು ಗರ್ಭಿಣಿಯಾಗಿದ್ದ ಪತ್ನಿ ಸಮೇತರಾಗಿ ಜುಲೈ 17ರಂದು ರೆಸ್ಟೊರೆಂಟ್ ಗೆ ಬಂದಿದ್ದರು. ಈ ಸಮಯದಲ್ಲಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ರೆಸ್ಟೋರೆಂಟ್ ನ ವಾಷ್ ರೂಂ ನಲ್ಲಿ ಸಿಬ್ಬಂದಿ, ಹೆರಿಗೆ ಸಹಜವಾಗಿ ನಡೆಯೋದಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ.

ಸದ್ಯ ತಾಯಿ-ಮಗು ಇಬ್ಬರು ಆರೋಗ್ಯವಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ರೆಸ್ಟೋರೆಂಟ್ ನಲ್ಲಿ ಮಗು ಜನಿಸಿದ ಹಿನ್ನಲೆಯಲ್ಲಿ ಆ ಮಗುವಿಗೆ ಇಡೀ ಜೀವಮಾನ ಉಚಿತವಾಗಿ ರೆಸ್ಟೋರೆಂಟ್ ನಲ್ಲಿ ಊಟೋಪಚಾರ ಒದಗಿಸುವ ಉಡುಗೊರೆ ಸಿಕ್ಕಿದೆ. ಅಷ್ಟೇ ಅಲ್ಲ ಮಗು ಉದ್ಯೋಗ ಮಾಡುವಂತಾ ವಯಸ್ಸಿಗೆ ಬಂದಾಗ ತನ್ನ ರೆಸ್ಟೋರೆಂಟ್ ನಲ್ಲೇ ಕೆಲಸ ನೀಡೋದಾಗಿ ವಾಗ್ದಾನ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...