alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯ ಫ್ರಿಡ್ಜ್ ನಲ್ಲಿತ್ತು ಮಗುವಿನ ಶವ…!

ಆಸ್ಪತ್ರೆಯಲ್ಲಿ ಡೆತ್ ಸರ್ಟಿಫಿಕೇಟ್ ಕೊಡಲು ವಿಳಂಬ ಮಾಡಿದ್ದರಿಂದ ಪೆರು ದೇಶದ ಮಹಿಳೆಯೊಬ್ಬಳು ತನ್ನ ಮಗುವಿನ ಶವವನ್ನು ಮನೆಯ ಫ್ರಿಡ್ಜ್ ನಲ್ಲಿಡಬೇಕಾಯ್ತು. 25 ವಾರಗಳ ಗರ್ಭಿಣಿಯಾಗಿದ್ದ ಮೋನಿಕಾ ಪಲೊಮಿನೋ ಎಂಬ ಮಹಿಳೆಗೆ ಕಳೆದ ಶನಿವಾರ ಹೆರಿಗೆಯಾಗಿತ್ತು.

ಅವಧಿಗೂ ಮುನ್ನ ಜನಿಸಿದ್ದರಿಂದ ಮಗು ಸಾವನ್ನಪ್ಪಿತ್ತು. ಕೂಡಲೇ ಅವಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಲಾಗಿದೆ. ಆದ್ರೆ ಮಗುವಿನ ಸಾವಿನ ಪ್ರಮಾಣಪತ್ರ ನೀಡಲು ಪೇಪರ್ ವರ್ಕ್ ಆಗಿರಲಿಲ್ಲ. ಡೆತ್ ಸರ್ಟಿಫಿಕೇಟ್ ಸಿಗುವವರೆಗೂ ಮಗುವಿನ ಶವವನ್ನು ಅಂತ್ಯ ಸಂಸ್ಕಾರ ಮಾಡುವಂತಿರಲಿಲ್ಲ.

ಹಾಗಾಗಿ ಮೋನಿಕಾ ಬೇರೆ ದಾರಿ ಕಾಣದೆ ಮಗುವಿನ ಶವವನ್ನು ಮನೆಯ ಫ್ರಿಡ್ಜ್ ನಲ್ಲಿಟ್ಟಿದ್ದಾಳೆ. ಶನಿವಾರ ಮಗು ಮೃತಪಟ್ಟಿದ್ದು, ಮಂಗಳವಾರ ಆಸ್ಪತ್ರೆಯವರು ಡೆತ್ ಸರ್ಟಿಫಿಕೇಟ್ ನೀಡಿದ್ದಾರೆ. ಹಾಗಾಗಿ ನಾಲ್ಕು ದಿನಗಳ ಕಾಲ ಶಿಶುವಿನ ಮೃತದೇಹವನ್ನು ಮನೆಯ ಫ್ರಿಡ್ಜ್ ನಲ್ಲಿಡಲಾಗಿತ್ತು. ಡೋಂಟ್ ಟಚ್ ಅಂತಾ ಅದರ ಮೇಲೆ ಮೋನಿಕಾ ನೋಟಿಸ್ ಅಂಟಿಸಿದ್ದಳು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...