alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಚಾಲನೆ ಮಾಡುವಾಗಲೇ ಯಡವಟ್ಟು ಮಾಡಿದ ಯುವತಿ

car canada

ಆಧುನಿಕತೆಯಿಂದಾಗಿ ಜಗತ್ತೇ ಹಳ್ಳಿಯಂತಾಗಿದೆ. ಅಪರಿಚಿತ ಪ್ರದೇಶಗಳಲ್ಲಿ ತಲುಪಬೇಕಾದ ವಿಳಾಸ ಗೊತ್ತಾಗದಿದ್ದರೆ, ಗೂಗಲ್ ಮ್ಯಾಪ್, ಜಿಪಿಎಸ್ ಬಳಸುವುದು ಇತ್ತೀಚೆಗೆ ಹೆಚ್ಚಾಗಿದೆ. ಇವನ್ನು ನೋಡಿಕೊಂಡು ತಲುಪಬೇಕಾದ ಜಾಗ ತಲುಪುತ್ತಾರೆ.

ಹೀಗೆ ಕಾರಿನಲ್ಲಿ ಜಿಪಿಎಸ್ ಮ್ಯಾಪ್ ನೋಡುತ್ತಾ ಹೊರಟ ಯುವತಿ, ತಲುಪಬೇಕಾದ ಸ್ಥಳವನ್ನು ತಲುಪದೇ ಕಾರನ್ನು ಸೀದಾ ಕೆರೆಗೆ ಇಳಿಸಿದ ಘಟನೆ ನಡೆದಿದೆ. 23 ವರ್ಷ ವಯಸ್ಸಿನ ಯುವತಿ ಕೆನಡಾದ ಒಂಟಾರಿಯೋ ಪ್ರದೇಶದಲ್ಲಿ ಹೋಗುವಾಗ, ವಿಳಾಸ ಗೊತ್ತಿಲ್ಲದ ಕಾರಣ, ಜಿ.ಪಿ.ಎಸ್. ಮೂಲಕ ಮ್ಯಾಪ್ ನೋಡುತ್ತಾ ಕಾರ್ ಚಾಲನೆ ಮಾಡಿಕೊಂಡು ಹೊರಟಿದ್ದಾಳೆ. ತಡರಾತ್ರಿಯಾಗಿದ್ದ ಕಾರಣ, ಆಕೆಗೆ ದಾರಿ ತಿಳಿಯದೇ ರಸ್ತೆ ಪಕ್ಕದ ಕೆರೆಗೆ ಇಳಿಸಿದ್ದಾಳೆ.

ಕೆರೆಗೆ ಕಾರ್ ಬಿದ್ದ ಕೂಡಲೇ, ಹೇಗೋ ಡೋರ್ ಓಪನ್ ಮಾಡಿಕೊಂಡು ಈಜಿ ದಡ ಸೇರಿದ್ದಾಳೆ. ಸ್ಥಳೀಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ. ಯುವತಿ ಮದ್ಯ ಸೇವಿಸಿರಲಿಲ್ಲ. ದಾರಿ ಕಾಣದೇ ಯಡವಟ್ಟು ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...