alex Certify
ಕನ್ನಡ ದುನಿಯಾ       Mobile App
       

Kannada Duniya

ಕಚೇರಿಗೆ ಬ್ರಾ ಧರಿಸದೆ ಬಂದ ಮಹಿಳೆ ಕೆಲಸ ಕಳೆದುಕೊಂಡ್ಲು…!

ಕಚೇರಿಗೆ ಬ್ರಾ ಧರಿಸಿ ಬರದೆ ಇರುವುದು ಮಹಿಳೆಗೆ ದುಬಾರಿಯಾಗಿ ಪರಿಣಮಿಸಿದೆ. ಕೆನಡಾದಲ್ಲಿ ಬ್ರಾ ಧರಿಸಿ ಬರದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಮಹಿಳೆ ಮಾನವ ಹಕ್ಕು ಉಲ್ಲಂಘನೆ ದೂರು ಸಲ್ಲಿಸಿದ್ದಾಳೆ.

ಕೆನಡಾದ ಆಲ್ಬರ್ಟಾ ನಗರದಲ್ಲಿರುವ ಕಚೇರಿಯೊಂದರಲ್ಲಿ ಮಹಿಳೆಯರಿಗೆ ಡ್ರೆಸ್ ಕೋಡ್ ಜಾರಿಯಾಗಿತ್ತು. ಕಚೇರಿ ಸಮಯದಲ್ಲಿ ಮಹಿಳೆಯರು ಬ್ರಾ ಅಥವಾ ಅಂಡರ್ ಶರ್ಟ್ ಧರಿಸುವುದು ಅನಿವಾರ್ಯವಾಗಿತ್ತು. ಆದ್ರೆ ಮಹಿಳೆ ಕ್ರಿಸ್ಟಿನಾ ಇದನ್ನು ಮಾನವ ಹಕ್ಕು ಉಲ್ಲಂಘನೆ ಎಂದಿದ್ದಾಳೆ. ಜೊತೆಗೆ ಬ್ರಾ ಧರಿಸಲು ನಿರಾಕರಿಸಿದ್ದಾಳೆ. ಹಾಗಾಗಿ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

ಕ್ರಿಸ್ಟಿನಾ ಕೆಲಸದಿಂದ ತೆಗೆದು ಹಾಕಿದ ಮೇಲಧಿಕಾರಿ ವಿರುದ್ಧ ಲಿಂಗತಾರತಮ್ಯ ದೂರನ್ನೂ ದಾಖಲಿಸಿದ್ದಾಳೆ. 25 ವರ್ಷದ ಕ್ರಿಸ್ಟಿನಾ ಮೇ ತಿಂಗಳಿನಿಂದ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡ್ತಿದ್ದಳು. ಕಿರಿಕಿರಿ ಎಂಬ ಕಾರಣಕ್ಕೆ ಎರಡು ತಿಂಗಳಿನಿಂದ ಬ್ರಾ ಧರಿಸುವುದನ್ನು ಬಿಟ್ಟಿದ್ದಳು. ಆದ್ರೆ ಇದೇ ಬ್ರಾ ಕೆಲಸ ಕಳೆದುಕೊಳ್ಳಲು ಕಾರಣವಾಗುತ್ತೆ ಎಂಬುದು ಆಕೆಗೆ ಗೊತ್ತಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...