alex Certify
ಕನ್ನಡ ದುನಿಯಾ       Mobile App
       

Kannada Duniya

ಉಚಿತವಾಗಿ ಕೊಟ್ಟಿದ್ದ ಸೇಬು ಹಣ್ಣು ತಿನ್ನದ್ದಕ್ಕೆ 33,000 ರೂ. ದಂಡ

ಅಮೆರಿಕದ ಕ್ರಿಸ್ಟಲ್ ಟಾಡ್ಲಾಕ್ ಎಂಬ ಮಹಿಳೆ ಡೆಲ್ಟಾ ಏರ್ ಲೈನ್ಸ್ ಮೂಲಕ ಪ್ರಯಾಣ ಮಾಡಿದ್ಲು. ಪ್ಯಾರಿಸ್ ನಿಂದ ಹೊರಟು ಸತತ 9 ಗಂಟೆಗಳ ಪ್ರಯಾಣದ ಬಳಿಕ ಮಿನ್ನಿಯಾಪೊಲೀಸ್ ತಲುಪಿದ್ಲು. ಈ ಸುದೀರ್ಘ ಪ್ರಯಾಣದ ಸಂದರ್ಭದಲ್ಲಿ ಡೆಲ್ಟಾ ಏರ್ ಲೈನ್ಸ್ ಎಲ್ಲರಿಗೂ ಒಂದೊಂದು ಸೇಬು ಹಣ್ಣನ್ನು ಸ್ನಾಕ್ಸ್ ರೂಪದಲ್ಲಿ ಫ್ರೀಯಾಗಿ ನೀಡಿತ್ತು.

ಕ್ರಿಸ್ಟಲ್ ಗೆ ಹಸಿವೆ ಆಗಿರಲಿಲ್ಲ. ಮಿನ್ನಿಯಾಪೊಲೀಸ್ ನಿಂದ ಡೆನ್ವರ್ ಗೆ ಆಕೆ ಮತ್ತೆ ಪ್ರಯಾಣ ಬೆಳೆಸಬೇಕಿತ್ತು. ಹಾಗಾಗಿ ಆಗ ತಿನ್ನೋಣ ಎಂದುಕೊಂಡು ಸೇಬುಹಣ್ಣನ್ನು ಹಾಗೇ ಇಟ್ಟುಕೊಂಡಿದ್ದಾಳೆ. ಒಂದು ಆ್ಯಪಲ್ ಅನ್ನು ತಿನ್ನದೇ ಇಟ್ಟುಕೊಂಡಿದ್ದಕ್ಕೆ ಆಕೆ ಈಗ 33,000 ರೂಪಾಯಿ ದಂಡ ಕಟ್ಟಬೇಕಾಗಿ ಬಂದಿದೆ.

ಬ್ಯಾಗ್ ಪರಿಶೀಲನೆ ಸಂದರ್ಭದಲ್ಲಿ ಪ್ಯಾಕ್ ಆಗಿದ್ದ ಸೇಬು ಹಣ್ಣು ನೋಡಿದ ಕಸ್ಟಮ್ಸ್ ಅಧಿಕಾರಿಗಳು, ಕ್ರಿಸ್ಟಲ್ ಗೆ 500 ಡಾಲರ್ ದಂಡ ಹಾಕಿದ್ದಾರೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರೋ ಕ್ರಿಸ್ಟಲ್, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...