alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸಕ್ಕೆ ಹೋದ ಫ್ಯಾಷನ್ ಡಿಸೈನರ್ ಸೇಲಾದ್ಲು

hydar mkl

ಹೈದರಾಬಾದ್: ವಿದೇಶದಲ್ಲಿ ಕೆಲಸ, ಕೈ ತುಂಬ ಸಂಬಳ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಹೀಗೆ ವಿದೇಶದಲ್ಲಿ ಕೆಲಸ ಮಾಡಲು ಹೋದ ಯುವತಿಯೊಬ್ಬಳು, ಏಜೆಂಟ್ ಮಾಡಿದ ಮೋಸದಿಂದ ಸಂಕಷ್ಟ ಅನುಭವಿಸುವಂತಾದ ಘಟನೆ ನಡೆದಿದೆ.

ಹೈದರಾಬಾದ್ ಮೂಲದ ಫ್ಯಾಷನ್ ಡಿಸೈನರ್ 30 ವರ್ಷದ ಹುಸ್ನಾ ಬೇಗಂ ಅವರಿಗೆ, ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಏಜೆಂಟ್ ಒಬ್ಬ ನಂಬಿಸಿದ್ದಾನೆ. ರಿಹಾದ್ ನಲ್ಲಿ ಫ್ಯಾಷನ್ ಡಿಸೈನರ್ ಕೆಲಸ ಖಾಲಿ ಇದ್ದು, ಹೆಚ್ಚಿನ ವೇತನ ಕೊಡಿಸುವುದಾಗಿ, ಆಕೆಯನ್ನು ಕರೆದುಕೊಂಡು ದಮ್ಮಂಗೆ ಕರೆದುಕೊಂಡು ಹೋಗಿ ಮಾರಾಟ ಮಾಡಿದ್ದಾನೆ. ಅಲ್ಲಿ ಕಿರುಕುಳ ಅನುಭವಿಸಿದ ಹುಸ್ನಾ ಮನೆಯವರಿಗೆ ಹೇಗೋ ವಿಷಯ ತಿಳಿಸಿದ್ದಾಳೆ.

ಆಕೆಯ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದು, ತಮ್ಮ ಮಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ವಿದೇಶಾಂಗ ಇಲಾಖೆಗೂ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಆಂಧ್ರ ಸಚಿವರೊಬ್ಬರು, ಕೊಲ್ಲಿ ರಾಷ್ಟ್ರಗಳಲ್ಲಿ ಇಲ್ಲಿನ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಮಾಹಿತಿ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...