alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕ ವೀಸಾಕ್ಕಾಗಿ ಮಹಾ ವಂಚನೆಗಿಳಿದಿದ್ಲು ಮಹಿಳೆ

kanzasalman-757

ಅಮೆರಿಕದ ವೀಸಾ ಪಡೆಯಲು ಭಾರತದ ಮಹಿಳೆಯೊಬ್ಬಳು ನಾವಿಕನೊಂದಿಗೆ ಮದುವೆಯಾಗಿದೆ ಅಂತಾ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾಳೆ. ತಾವಿಬ್ಬರೂ ದಂಪತಿ ಅಂತಾ ಹೇಳಿಕೊಂಡು ಮಹಿಳೆ ನಾವಿಕನ ಜೊತೆಗೆ ವೀಸಾ ಕಚೇರಿಗೆ ಬಂದಿದ್ಲು. ವೀಸಾ ಇಂಟರ್ವ್ಯೂ ವೇಳೆ ಆತನ ಬಳಿ ಹಲವು ಯುಎಸ್ ವೀಸಾ ಸ್ಟಾಂಪ್ ಗಳಿವೆ, ನಿನ್ನ ಬಳಿ ಯಾಕಿಲ್ಲ ಅಂತಾ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ವಂಚನೆ, ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿದೆ. ಗುಜರಾತ್ ನಿವಾಸಿಯಾಗಿರುವ ಕಿರಣ್ ಪಾರ್ಮರ್ ಬಂಧಿತ ಮಹಿಳೆ. ಮೇ 3ರಂದು ಈಕೆ ನಿರುದ್ಯೋಗಿ ನಾವಿಕ ನಿಕೋಲಸ್ ಜೂಡ್ ಎಂಬಾತನನ್ನು ಬಾಡಿಗೆಗೆ ಪಡೆದಿದ್ಲು.

ತನ್ನ ಪತಿಯೆಂದು ಸುಳ್ಳು ನಾಟಕವಾಡಿದ್ರೆ 1.5 ಲಕ್ಷ ರೂಪಾಯಿ ಕೊಡೋದಾಗಿ ನಿಕೋಲಸ್ ಬಳಿ ಹೇಳಿದ್ಲು. ನಿಕೋಲಸ್ ತನ್ನ ಪತಿ, ಮುಂಬೈನಲ್ಲಿ ನೆಲೆಸಿದ್ದಾನೆ ಅಂತಾ ವೀಸಾ ಅಧಿಕಾರಿಗಳ ಬಳ್ಳಿ ಸುಳ್ಳು ಹೇಳಿದ್ದ ಕಿರಣ್, ಆತ ಹಲವು ಬಾರಿ ಅಮೆರಿಕಕ್ಕೆ ಹೋಗಿ ಬಂದಿದ್ದಾನೆ. ತನಗೂ ವೀಸಾ ನೀಡಿ ಅಂತಾ ಮನವಿ ಮಾಡಿದ್ಲು. ನೀನ್ಯಾಕೆ ಒಮ್ಮೆಯೂ ಹೋಗಿಲ್ಲ ಎಂಬ ಪ್ರಶ್ನೆಗೆ ಅವಳ ಬಳಿ ಸರಿಯಾದ ಉತ್ತರವಿರಲಿಲ್ಲ.

ದಂಪತಿ ಮಧ್ಯೆ ತಾಳಮೇಳವೇ ಇಲ್ಲದ್ದನ್ನು ನೋಡಿ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ನಿರುದ್ಯೋಗ ಮತ್ತು ಅನಾರೋಗ್ಯದಿಂದ ಬಳಲಿದ್ದ ನಿಕೋಲಸ್ ಗೆ ಹಣದ ಅಗತ್ಯವಿದ್ದಿದ್ದರಿಂತ ಪತಿಯಂತೆ ನಾಟಕವಾಡಲು ಒಪ್ಪಿಕೊಂಡಿದ್ದ. ಈಗ ಇಬ್ಬರೂ ಪೊಲೀಸರ ಅತಿಥಿಗಳಾಗಿದ್ದಾರೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...