alex Certify
ಕನ್ನಡ ದುನಿಯಾ       Mobile App
       

Kannada Duniya

15 ವರ್ಷದವಳೆಂದು ಸುಳ್ಳು ಹೇಳಿ ಮಹಿಳೆ ಮಾಡಿದ್ದು ನೀಚ ಕೆಲಸ

ಎಸ್ಸೆಕ್ಸ್ ನಲ್ಲಿ 15 ವರ್ಷದವಳೆಂದು ಸುಳ್ಳು ಹೇಳಿ ಬಾಲಕನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಮಹಿಳೆಯನ್ನು ಬಂಧಿಸಲಾಗಿದೆ. 44 ವರ್ಷದ ಮಹಿಳೆ ಮೇರಿ ಡೆಂಟ್ ಫೇಸ್ಬುಕ್ ನಲ್ಲಿ ಪ್ರೊಫೈಲ್ ಓಪನ್ ಮಾಡಿದ್ಲು. ತನಗೆ 15 ವರ್ಷ ಅಂತಾ ಅದರಲ್ಲಿ ನಮೂದಿಸಿದ್ದ ಮಹಿಳೆ, ಬೇರೆ ಹೆಸರಲ್ಲಿ ಖಾತೆ ತೆರೆದಿದ್ದಾಳೆ. ಬಾಲಕಿಯ ಫೋಟೋ ಒಂದನ್ನು ಹಾಕಿದ್ದಾಳೆ.

ಹೀಗೆ ಬಾಲಕನೊಬ್ಬನ ಜೊತೆಗೆ ಮೇರಿ ಚಾಟಿಂಗ್ ಶುರು ಮಾಡಿದ್ದಳು. ಕೊನೆಗೆ ಇಬ್ಬರೂ ಭೇಟಿ ಮಾಡಲು ನಿರ್ಧರಿಸಿದ್ದಾರೆ. ಮೊದಲ ಭೇಟಿಯಲ್ಲಿ ಮೇರಿ ಬಾಲಕನಿಗೆ ಚುಂಬಿಸಿ, ಪ್ರಚೋದಿಸಿದ್ದಳು. ಎರಡನೇ ಬಾರಿ ಬಾಲಕನ ಮನೆಯಲ್ಲೇ ಅವನನ್ನು ಭೇಟಿಯಾದ ಮಹಿಳೆ ಆತನ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದಾಳೆ.

ಸದ್ಯ ಪೊಲೀಸರು ಮೇರಿಯನ್ನು ಬಂಧಿಸಿದ್ದು, ಕೋರ್ಟ್ ಆಕೆಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 15 ವರ್ಷದ ಬಾಲಕನನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವ ಮಹಿಳೆಯನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 15ರ ಆಸುಪಾಸಿನ ಹುಡುಗರೊಂದಿಗೆ ಸ್ನೇಹ ಬೆಳೆಸಲೆಂದೇ ಮೇರಿ ಫೇಸ್ಬುಕ್ ನಲ್ಲಿ ಸುಳ್ಳು ಪ್ರೊಫೈಲ್ ಸೃಷ್ಟಿಸುತ್ತಿದ್ಲು ಅಂತಾ ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...