alex Certify
ಕನ್ನಡ ದುನಿಯಾ       Mobile App
       

Kannada Duniya

200 ಅಡಿ ಆಳಕ್ಕೆ ಬಿದ್ದವಳು 7 ದಿನ ಜೀವ ಉಳಿಸಿಕೊಂಡಿದ್ದು ಹೇಗೆ ಗೊತ್ತಾ?

ಅಮೆರಿಕಾದ ಒರೆಗಾನ್ ನಲ್ಲಿ ಹುಡುಗಿಯೊಬ್ಬಳು ಸಾವು ಗೆದ್ದು ಬರಲು ನಡೆಸಿದ ಹೋರಾಟ ದಂಗಾಗಿಸುವಂತಿದೆ. ಬದುಕುಳಿಯಲು ಹುಡುಗಿ ಸತತ 7 ದಿನಗಳ ಕಾಲ ಜೀಪಿನ ರೇಡಿಯೇಟರ್ ನಲ್ಲಿದ್ದ ನೀರು ಕುಡಿದಿದ್ದಾಳೆ. ಕ್ಯಾಲಿಫೋರ್ನಿಯಾದ 23 ವರ್ಷದ ನಿವಾಸಿ ಏಂಜೆಲಾ ಹೈವೆಯಲ್ಲಿ ಹೋಗ್ತಿದ್ದಳು. ಈ ವೇಳೆ ಪ್ರಾಣಿಯೊಂದು ರಸ್ತೆಗೆ ಅಡ್ಡ ಬಂದಿದೆ. ಅದನ್ನು ರಕ್ಷಿಸಲು ಹೋದ ಏಂಜೆಲಾ ಜೀಪ್ ಸಮೇತ 200 ಅಡಿ ಆಳಕ್ಕೆ ಬಿದ್ದಿದ್ದಾಳೆ.

ಜೀಪು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಮರಭೂಮಿಯಲ್ಲಿ ಜೀವದ ಜೊತೆ ಎಂಜೆಲಾ ಹೋರಾಡಿದ್ದಾಳೆ. ಮೊದಲು ಜೀಪಿನ ರೇಡಿಯೇಟರ್ ನಲ್ಲಿದ್ದ ನೀರನ್ನು ಕುಡಿದಿದ್ದಾಳೆ. ನಂತ್ರ ಅದ್ರ ಸಹಾಯದಿಂದ ಸುತ್ತಮುತ್ತಲ ಪ್ರದೇಶದಲ್ಲಿರುವ ನೀರನ್ನು ಸಂಗ್ರಹಿಸುವ ಕೆಲಸ ಮಾಡಿದ್ದಾಳೆ. ಸತತ 7 ದಿನಗಳ ಕಾಲ ಆಕೆ ಹೋರಾಡಿದ ರೀತಿ ಪೊಲೀಸರನ್ನೇ ದಂಗಾಗಿಸಿದೆ.

ಏಂಜೆಲಾ ಫೋನ್ ಹಾಳಾಗಿತ್ತು. ಇದ್ರಿಂದ ಕಂಗಾಲಾಗಿದ್ದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಎರಡು ದಿನವಾದ್ರೂ ಪೊಲೀಸರಿಗೆ ಏಂಜೆಲಾ ಪತ್ತೆಯಾಗಲಿಲ್ಲ. ಕುಟುಂಬಸ್ಥರು ಏಂಜೆಲಾ ಬಗ್ಗೆ ಸುಳಿವು ನೀಡಿದ್ರೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ರು. 7 ದಿನಗಳ ನಂತ್ರ ದಾರಿಯಲ್ಲಿ ಹೋಗ್ತಿದ್ದವರಿಗೆ ಏಂಜೆಲಾ ಧ್ವನಿ ಕೇಳಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ನಂತ್ರ ಏಂಜೆಲಾಳನ್ನು ಪೊಲೀಸರು ರಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...