alex Certify
ಕನ್ನಡ ದುನಿಯಾ       Mobile App
       

Kannada Duniya

ಆಕೆ ಹಾಡೋದನ್ನು ಕೇಳೋಕಾಗದೇ ಕೋರ್ಟ್ ಮೆಟ್ಟಿಲೇರಿದರು…!

ಸಂಗೀತ ಎಲ್ಲರ ಮನಸ್ಸನ್ನು ತಣಿಸುತ್ತೆ. ಕೆಲವರಿಗೆ ಚೆನ್ನಾಗಿ ಹಾಡೋಕೆ ಬರೋದಿಲ್ಲ. ಆದರೆ ಹಾಡನ್ನು ಅವರವರ ಸಂತೋಷಕ್ಕಾಗಿ ಗುನುಗುತ್ತಾರೆ. ಆದರೆ ಇಲ್ಲೊಬ್ಬಾಕೆ ಚೆನ್ನಾಗಿ ಹಾಡಲು ಬಾರದಿದ್ದರೂ ಕೆಟ್ಟದಾಗಿ ಹಾಡಿ, ಕೋರ್ಟ್ ಮೆಟ್ಟಿಲೇರುವಂತಾಗಿದೆ.

ಆಶ್ಚರ್ಯ ಆದರೂ ನಿಜ. ಇಂಥದ್ದೊಂದು ಘಟನೆ ನಡೆದಿರೋದು ಇಂಗ್ಲೆಂಡ್ ನಲ್ಲಿ. ಇಲ್ಲಿನ ನೋರ್ವಿಚ್ ಎಂಬಲ್ಲಿ ಮಹಿಳೆಯೊಬ್ಬಳು ತನ್ನ ಸ್ವಂತ ಫ್ಲಾಟ್ ನಲ್ಲಿ ಟಿವಿ ನೋಡುತ್ತಾ ಹೆಡ್ ಫೋನ್ ಹಾಕಿಕೊಂಡು ಮುಳುಗುತ್ತಿರುವ ಬೆಕ್ಕು ಚೀರುವಂತೆ ಹಾಡುತ್ತಿದ್ದಳು. ಇದರಿಂದ ದಿನವೂ ಕಿರಿಕಿರಿ ಅನುಭವಿಸುತ್ತಿದ್ದ ಆಕೆಗಿಂತ 2 ಮಹಡಿ ಮೇಲಿನ ಫ್ಲಾಟ್ ನಲ್ಲಿದ್ದವರೊಬ್ಬರು ಪೊಲೀಸರಿಗೆ ದೂರಿದ್ದಾರೆ.

ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ವೇಳೆ ಆಕೆ ಹಾಡಿದ್ದನ್ನು ತಾವು ರೆಕಾರ್ಡ್ ಮಾಡಿದ್ದಾಗಿ ತಿಳಿಸಿ ಅದನ್ನು ಕೋರ್ಟ್ ನಲ್ಲಿ ಎಲ್ಲರಿಗೂ ಕೇಳಿಸಿದ್ದಾರೆ. ಬಳಿಕ ಕೋರ್ಟ್, ಕೆಟ್ಟದಾಗಿ ಹಾಡುತ್ತಿದ್ದ ಮಹಿಳೆಗೆ ಮನೆಯಿಂದ ಹೊರಗೆ ಕೇಳಿಸದಂತೆ ಮಾತ್ರ ಹಾಡುವ ಶಿಕ್ಷೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...