alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಗಿಂತ ಹೆಚ್ಚು ಪತ್ನಿ ಪ್ರೀತಿಸುತ್ತಿದ್ದವನಿಗೆ ಸಿಕ್ತು ವಿಚ್ಛೇದನ..!

ಪತಿ ತನ್ನನ್ನು ಹೆಚ್ಚು ಪ್ರೀತಿ ಮಾಡಬೇಕೆಂದು ಪತ್ನಿಯಾದವಳು ಬಯಸ್ತಾಳೆ. ಕೆಲವರಿಗೆ ಮಾತ್ರ ಈ ಅದೃಷ್ಟವಿರುತ್ತೆ. ಆದ್ರೆ ಸೌದಿ ಅರೇಬಿಯಾದಲ್ಲಿ ಮಹಿಳೆಯೊಬ್ಬಳು ವಿಚಿತ್ರ ಕಾರಣಕ್ಕೆ ಪತಿಗೆ ವಿಚ್ಛೇದನ ನೀಡಿದ್ದಾಳೆ. ಪತಿಯಾದವನು ತನ್ನ ತಾಯಿಗಿಂತ ಹೆಚ್ಚು ನನ್ನನ್ನು ಪ್ರೀತಿ ಮಾಡ್ತಾನೆ ಎಂಬುದೇ ವಿಚ್ಛೇದನಕ್ಕೆ ಕಾರಣವಾಗಿದೆ.

ಪತಿ, ಪತ್ನಿಗಾಗಿ ಕುಟುಂಬಸ್ಥರನ್ನು ಬಿಟ್ಟು ಬಂದಿದ್ದಾನೆ. ಇದೇ ಆತ ಮಾಡಿದ ದೊಡ್ಡ ತಪ್ಪಾಗಿದೆ. ಕೋರ್ಟ್ ಮುಂದೆ ವಿಚ್ಚೇದನದ ವಿಚಾರಣೆ ವೇಳೆ ಮಹಿಳೆ ವಿಚ್ಛೇದನಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾಳೆ.

ಪತಿ ನನಗೆ ಎಲ್ಲವನ್ನೂ ತಂದುಕೊಡ್ತಾನೆ. ನನ್ನನ್ನು ಅತಿಯಾಗಿ ಪ್ರೀತಿ ಮಾಡ್ತಾನೆ. ಆದ್ರೆ ತನ್ನ ತಾಯಿಯನ್ನು ಆತ ಪ್ರೀತಿ ಮಾಡೋದಿಲ್ಲ. ನನಗಾಗಿ ತನ್ನ ತಾಯಿ, ಕುಟುಂಬಸ್ಥರನ್ನು ಬಿಟ್ಟು ಬಂದವನು ನನ್ನನ್ನು ಬಿಟ್ಟು ಹೋಗೋದಿಲ್ಲ ಎಂಬ ಗ್ಯಾರಂಟಿ ಏನು ಎಂದು ಆಕೆ ಪ್ರಶ್ನೆ ಮಾಡಿದ್ದಾಳೆ. ಪತ್ನಿಗಾಗಿ ಎಲ್ಲರನ್ನೂ ಬಿಟ್ಟು ಬಂದಿದ್ದು ಈಗ ಆಕೆಗೆ ವಿಚ್ಛೇದನ ನೀಡುವುದಿಲ್ಲವೆಂದು ಪತಿ ಹೇಳಿದ್ದಾನೆ. ಇಬ್ಬರ ಅಭಿಪ್ರಾಯ ಕೇಳಿದ ಕೋರ್ಟ್ ಕೊನೆಯದಾಗಿ ವಿಚ್ಛೇದನ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...