alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಕ್ಕೆ ಕುತ್ತಾಯ್ತು ಕಚೇರಿಯಲ್ಲಿ ಮಾಡಿದ ಹೆಚ್ಚುವರಿ ಕೆಲಸ

ಅತಿಯಾದ್ರೆ ಅಮೃತವೂ ವಿಷ ಎಂಬ ಮಾತಿದೆ. ಯಾವ ಕೆಲಸವೇ ಇರಲಿ ಮಿತಿ ಮೀರಿದ್ರೆ ಅಪಾಯ ನಿಶ್ಚಿತ. ಇದಕ್ಕೆ ಜಪಾನಿನ ಮಹಿಳೆ ಉತ್ತಮ ನಿದರ್ಶನ. ಮಹಿಳೆ ಕಚೇರಿಯಲ್ಲಿ ಅತಿ ಹೆಚ್ಚು ಕೆಲಸ ಮಾಡಿ ಪ್ರಾಣ ಕಳೆದುಕೊಂಡಿದ್ದಾಳೆ. 31 ವರ್ಷದ ಮಹಿಳೆ ಸಾವಿಗೆ ಅತಿ ಹೆಚ್ಚು ಕೆಲಸ ಮಾಡಿದ್ದು ಕಾರಣ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಟೊಕಿಯೋದ ಬ್ರಾಡ್ಕಾಸ್ಟರ್ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುವ ಮಿವಾ ಸಾಡೋ ಒಂದು ತಿಂಗಳಲ್ಲಿ 159 ಗಂಟೆಗಳ ಕಾಲ ಕೆಲಸ ಮಾಡಿದ್ದಾಳೆ. ಕೇವಲ 2 ದಿನ ಮಾತ್ರ ರಜೆ ಪಡೆದಿದ್ದಳು. 2013ರಲ್ಲಿ ಹೃದಯಾಘಾತದಿಂದ ಆಕೆ ಸಾವನ್ನಪ್ಪಿದ್ದಳು. ಇದಕ್ಕೆ ಆಕೆ ಹೆಚ್ಚು ಕೆಲಸ ಮಾಡಿದ್ದೇ ಕಾರಣ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೊಂದೇ ಅಲ್ಲ, 2015ರಲ್ಲಿ ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಇನ್ನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆಗೂ ಮೊದಲು ನನಗೆ ಸಾಯಬೇಕೆನಿಸುತ್ತಿದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾನು ಬೇಸತ್ತಿದ್ದೇನೆಂದು ಆಕೆ ಬರೆದಿದ್ದಳು. ಮಹಿಳೆ ಸಾವಿಗೂ ಓವರ್ ಟೈಂ ಕೆಲಸ ಕಾರಣ ಎಂದು ಕಾರ್ಮಿಕ ಇಲಾಖೆ ವರದಿ ನೀಡಿದೆ.

ಓವರ್ ಟೈಂ ಕೆಲಸ ಮಾಡಿಸುವ ಕಂಪನಿ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿದೆ. ಪ್ರತಿ ತಿಂಗಳು 100 ಗಂಟೆ ಮಾತ್ರ ಓವರ್ ಟೈಂಗೆ ಅವಕಾಶ ನೀಡಬೇಕೆಂದು ಇಲಾಖೆ ಹೇಳಿದೆ. ಹಿಂದಿನ ವರ್ಷ ಕೂಡ ಸರ್ಕಾರ ಈ ಬಗ್ಗೆ ಅಂಕಿ-ಅಂಶ ನೀಡಿದೆ. ಐದರಲ್ಲಿ ಒಬ್ಬರು ಓವರ್ ಟೈಂ ಕೆಲಸ ಮಾಡಿ ಸಾವನ್ನಪ್ಪುತ್ತಿದ್ದಾರೆಂದು ಸರ್ಕಾರ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...