alex Certify
ಕನ್ನಡ ದುನಿಯಾ       Mobile App
       

Kannada Duniya

ಷೋ ರೂಂ ನಿಂದ ಹೊರಬಂತು ಫೆರಾರಿ, ಮರು ನಿಮಿಷದಲ್ಲೇ ಸೇರಿತು ಗೋರಿ

ಚೀನಿಯರಿಗೆ ಫೆರಾರಿ ಕಾರುಗಳ ಕ್ರೇಜ್ ಅಂದ್ರೆ ಪ್ರಾಣಕ್ಕಿಂತ ಹೆಚ್ಚು. ಜೀವಮಾನದಲ್ಲಿ ಒಮ್ಮೆಯಾದ್ರು ಫೆರಾರಿ ಕಾರುಗಳಿಗೆ ಮಾಲೀಕರಾಗಬೇಕು ಅನ್ನೋದೇ ಚೀನಿಯರ ಕನಸು. ಆ ಕನಸು ಚೀನಾದ ಯುವತಿಯೊಬ್ಬಳಿಗೆ ಇತ್ತೀಚೆಗಷ್ಟೆ ನನಸಾಗಿತ್ತು. ಆದ್ರೆ ಆ ಕನಸು ನನಸಾದ ಮರುಗಳಿಗೆಯಲ್ಲೇ ಚಿಂದಿಯಾಗಿಬಿಟ್ಟಿದೆ.

ಚೀನಾದ ಯುವತಿಯೊಬ್ಬಳು 4 ಕೋಟಿ 50 ಲಕ್ಷ ರೂಪಾಯಿ ಕೊಟ್ಟು ಬ್ರ್ಯಾಂಡ್ ನ್ಯೂ ಫೆರಾರಿ ಕಾರನ್ನ ಷೋರೂಂ ನಿಂದ ಖರೀದಿ ಮಾಡಿದಳು. ಷೋರೂಮ್ನಿಂದ ಫೆರಾರಿ ರೋಡಿಗಿಳಿದು ಸವಾರಿ ಹೊರಟ ಒಂದೇ ನಿಮಿಷದಲ್ಲಿ ಗೋರಿ ಸೇರಿದೆ. ಇದೇನಾ ಷೋ ರೂಮ್ನಿಂದ ಹೊರಬಿದ್ದ ಕಾರು ಅಂತ ಆಶ್ಚರ್ಯಪಡುವ ಹಾಗೆ ಸಂಪೂರ್ಣ ನಜ್ಜುಗುಜ್ಜಾಗಿದೆ.

ಕನಸಿನ ಕಾರು ಕೈಗೆ ಸಿಕ್ತಲ್ಲ ಅನ್ನೋ ಜೋಷ್ನಲ್ಲಿ ಸ್ಟೇರಿಂಗ್ ಹಿಡಿದ ಆಕೆ ಫೆರಾರಿ ವೇಗಕ್ಕೆ ಬ್ರೇಕ್ ಹಾಕೋದಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ ನಿಯಂತ್ರಣ ಕಳೆದುಕೊಂಡು ಫೆರಾರಿ ಅಪಘಾತಕ್ಕೀಡಾಯ್ತು. ಆ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅಪಘಾತದಲ್ಲಿ ಇನ್ನಾರಿಗೂ ತೊಂದರೆ ಆಗಿಲ್ಲ. ಆದ್ರೆ ಕನಸಿನ ಕಾರು ಮಾತ್ರ ಆಕೆಯ ಕಣ್ಣೆದುರಲ್ಲೇ ಗೋವಿಂದ ಗೋವಿಂದ…!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...