alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರಿ ಅಡಿ ಅಪ್ಪಚ್ಚಿಯಾಗ್ತಿದ್ದ ಮಹಿಳೆ ಬಚಾವ್ ಆಗಿದ್ಹೇಗೆ?

ಮಹಿಳೆಯೊಬ್ಬಳು ರಸ್ತೆ ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಭಯಾನಕ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ. ಚೀನಾದಲ್ಲಿ ನಡೆದ ಘಟನೆ ಇದು.

ಮಹಿಳೆಯೊಬ್ಳು ರಸ್ತೆ ದಾಟಿಕೊಂಡು ಇನ್ನೊಂದು ಬದಿಗೆ ಬಂದಿದ್ದಾಳೆ. ಅಲ್ಲಿಂದ ಯಾವುದೋ ವಸ್ತುವೊಂದನ್ನು ತೆಗೆದುಕೊಂಡು ಮತ್ತೆ ರಸ್ತೆ ದಾಟಲು ಓಡಿದ್ದಾಳೆ. ಒಂದು ಕಡೆಯಿಂದ ವೇಗವಾಗಿ ಬರುತ್ತಿದ್ದ ಲಾರಿಯನ್ನು ಆಕೆ ಗಮನಿಸಿಲ್ಲ.

ಓಡಿ ಬರುವ ಧಾವಂತದಲ್ಲಿ ಲಾರಿಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿದ್ದಾಳೆ. ಲಾರಿ ಚಾಲಕ ತಕ್ಷಣ ಬ್ರೇಕ್ ಹಾಕಿದ. ಆದ್ರೆ ಮಹಿಳೆಯ ತಲೆ ಲಾರಿಯ ಚಕ್ರದ ಸಮೀಪವೇ ಇತ್ತು. ಒಂಚೂರು ಹೆಚ್ಚು ಕಡಿಮೆ ಆಗಿದ್ರೂ ಚಕ್ರದ ಅಡಿ ಸಿಲುಕಿ ತಲೆ ಛಿದ್ರವಾಗುತ್ತಿತ್ತು.

ಆದ್ರೆ ಮಹಿಳೆಯ ಅದೃಷ್ಟ ನೆಟ್ಟಗಿದ್ದಿದ್ರಿಂದ ಬಚಾವ್ ಆಗಿದ್ದಾಳೆ. ಲಾರಿಯಿಂದ ಕೆಳಗಿಳಿದು ಬಂದ ಚಾಲಕ ಅವಳನ್ನು ಮೇಲಕ್ಕೆತ್ತಿ ಉಪಚರಿಸಿದ್ದಾನೆ. ಕೂಡಲೇ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾನೆ.

Inches from death.

Inches from death.

Posted by Shanghaiist on Thursday, December 7, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...