alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರವಾದಾಗ ನಗ್ನಳಾಗಿ ಹಾಸಿಗೆ ಮೇಲಿದ್ಲು ಮಹಿಳೆ

ಸಾಮಾಜಿಕ ಜಾಲತಾಣದಲ್ಲಿ ಮಿ ಟೂ ಅಭಿಯಾನ ನಡೆಯುತ್ತಿದೆ. ಮಹಿಳೆಯರು ತಮಗಾದ ಲೈಂಗಿಕ ದೌರ್ಜನ್ಯವನ್ನು ಮಿ ಟೂ ಮೂಲಕ ಹೇಳ್ತಿದ್ದಾರೆ. ಬ್ರಿಟನ್ ಮಹಿಳೆಯೊಬ್ಬಳು ತನ್ನ ನೋವನ್ನು ಮಿ ಟೂನಲ್ಲಿ ಹೇಳಿಕೊಳ್ಳುವ ಜೊತೆಗೆ ಅತ್ಯಾಚಾರ ಪ್ರಕರಣದ ವಿರುದ್ಧ ಹೋರಾಡಲು ಹಣ ಸಂಗ್ರಹದಲ್ಲಿ ತೊಡಗಿದ್ದಾಳೆ. ವ್ಯಕ್ತಿಯೊಬ್ಬರು ಆಕೆಗೆ 13 ಲಕ್ಷ ರೂಪಾಯಿ ನೀಡಿದ್ದಾರೆ.

38 ವರ್ಷದ ಎಮಿಲಿ ಹಂಟ್ ಗೆ ಅತ್ಯಾಚಾರದ ವಿರುದ್ಧ ಹೋರಾಡಲು ಸುಮಾರು 85 ಲಕ್ಷ ರೂಪಾಯಿ ಬೇಕಂತೆ. ಬಿಬಿಸಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಮಹಿಳೆ ಎಲ್ಲ ವಿಷಯವನ್ನು ಜನರ ಮುಂದಿಟ್ಟಿದ್ದಾಳೆ. 2015ರಲ್ಲಿ ಎಮಿಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳಂತೆ.

ಸಂಜೆ ತಂದೆ ಜೊತೆ ಸ್ನ್ಯಾಕ್ಸ್ ತಿನ್ನುತ್ತ ಕುಳಿತಿದ್ದವಳಿಗೆ ಆಮೇಲೆ ಏನಾಯ್ತು ಎಂಬುದು ಗೊತ್ತಿಲ್ಲವಂತೆ. ಎಚ್ಚರವಾದಾಗ ಹಾಸಿಗೆ ಮೇಲೆ ಮಲಗಿದ್ದ ಮಹಿಳೆ ನಗ್ನಳಾಗಿದ್ದಳಂತೆ. ಆಕೆ ಪಕ್ಕದಲ್ಲೊಬ್ಬ ಅಪರಿಚಿತ ವ್ಯಕ್ತಿ ಇದ್ದನಂತೆ. ಪೂರ್ವ ಲಂಡನ್ ಹೊಟೇಲ್ ನಲ್ಲಿ ಈ ಘಟನೆ ನಡೆದಿತ್ತಂತೆ. ಒಂದು ಮಗುವಿನ ತಾಯಿ ಎಮಿಲಿ ಐದು ಗಂಟೆ ನನ್ನ ಜೊತೆ ಏನಾಯ್ತು ಎಂಬುದು ನನಗೆ ಗೊತ್ತಿರಲಿಲ್ಲ. ಪೊಲೀಸರು, ಬಳಸಿದ ಕಾಂಡೋಮ್ ರೂಮ್ ನಲ್ಲಿ ಸಿಕ್ಕಿದೆ ಎಂದ ನಂತ್ರವಷ್ಟೇ ನನ್ನ ಮೇಲೆ ಅತ್ಯಾಚಾರವಾಗಿದೆ ಎಂಬ ಸಂಗತಿ ಅರ್ಥವಾಗಿತ್ತು ಎಂದಿದ್ದಾಳೆ. ಒಂದು ನಿಮಿಷದ ವಿಡಿಯೋ ಕೂಡ ಮಾಡಿದ್ದರು. ಡ್ರಗ್ಸ್ ನೀಡಿ ಅತ್ಯಾಚಾರವೆಸಗಲಾಗಿದೆ ಎಂದು ಮಹಿಳೆ ದೂರಿದ್ದಾಳೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೆ ಸಾಕ್ಷ್ಯಾಧಾರದ ಕೊರತೆಯಿಂದ ಕೇಸ್ ಮುಚ್ಚಿ ಹೋಯ್ತಂತೆ. ಹಾಗಾಗಿ ಖಾಸಗಿಯಾಗಿ ಹೋರಾಟ ನಡೆಸಲು ಮುಂದಾದ ಎಮಿಲಿ ಹಣ ಸಂಗ್ರಹ ಕಾರ್ಯಕ್ಕಿಳಿದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...