alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ಹೊಟ್ಟೆಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಕಲ್ಲು

ಬೆನ್ನುನೋವು ಮತ್ತು ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾದ ಬಳಿಕ ಅಕೆಯ ಕಿಡ್ನಿಯಲ್ಲಿ ಪತ್ತೆಯಾಗಿರುವ ಕಲ್ಲುಗಳನ್ನ ನೋಡಿ ವೈದ್ಯರೇ ಅಚ್ಚರಿಪಟ್ಟಿದ್ದಾರೆ. ಆನಂತರದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಆಕೆಯ ಕಿಡ್ನಿಯಿಂದ ವೈದ್ಯರು ಹೊರತೆಗೆದಿದ್ದು ಸುಮಾರು 3000 ಕಲ್ಲುಗಳನ್ನ.

ಹೌದು. ಈ ಅಚ್ಚರಿಯ ವಿದ್ಯಮಾನ ನಡೆದಿರೋದು ಚೀನಾದ ಚಾಂಗ್ಸೋ ಎಂಬಲ್ಲಿ. ಕಳೆದ ವಾರ 56ವರ್ಷದ ಮಹಿಳೆಯೊಬ್ಬರು ತಡೆಯಲಾರದ ಬೆನ್ನು ನೋವು ಮತ್ತು ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನ ತಪಾಸಣೆಗೊಳಪಡಿಸಿದ ವೈದ್ಯರಿಗೆ ಆಕೆಯ ಬಲ ಕಿಡ್ನಿಯಲ್ಲಿ ಕಲ್ಲುಗಳಿರೋದು ಗೊತ್ತಾಯ್ತು. ಆದ್ರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಲ್ಲುಗಳಿರೋದು ಗೊತ್ತಿರಲಿಲ್ಲ.

ಆನಂತರದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿಯಲ್ಲಿದ್ದ ಕಲ್ಲುಗಳನ್ನ ಹೊರತೆಗೆಯುವಲ್ಲಿ ವೈದ್ಯರ ತಂಡ ಸಫಲವಾಗಿದೆ. ಈ ಕಲ್ಲುಗಳನ್ನ ಲೆಕ್ಕ ಹಾಕೋದಕ್ಕೆ ವೈದ್ಯರ ತಂಡಕ್ಕೆ ಒಂದು ಗಂಟೆ ಕಾಲಾವಕಾಶ ಬೇಕಾಯ್ತಂತೆ. ಹಾಗಾಗಿ ಲೆಕ್ಕಕ್ಕೆ ಸಿಕ್ಕ ನಿಖರವಾದ ಕಿಡ್ನಿ ಕಲ್ಲುಗಳ ಸಂಖ್ಯೆ 2980.

ಗಿನ್ನಿಸ್ ದಾಖಲೆಗಳ ಪ್ರಕಾರ ಅತಿಹೆಚ್ಚು ಕಿಡ್ನಿ ಸ್ಟೋನ್ಸ್ಗಳನ್ನು ಹೊಂದಿದ ದಾಖಲೆ ಇರೋದು ಭಾರತದ ಮಹಾರಾಷ್ಟ್ರದಲ್ಲಿರುವ ಧನರಾಜ್ ವಾಡ್ಲೆ ಎಂಬ ವ್ಯಕ್ತಿಯ ಬಳಿ. ಆತನ ಕಿಡ್ನಿಯಿಂದ ವೈದ್ಯರು ಹೊರತೆಗೆದಿದ್ದು ಬರೋಬ್ಬರಿ 1, 72,155 ಕಲ್ಲುಗಳನ್ನ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...