alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸಿಗೆ ಮೇಲಿದ್ದ ಅತಿಥಿ ನೋಡಿ ನಡುಗಿ ಹೋದ್ಲು ಮಹಿಳೆ

snake-650_650x400_71496662297

ಒಮ್ಮೊಮ್ಮೆ ಮನೆಯಲ್ಲಿ ದಿಢೀರನೆ ಪ್ರತ್ಯಕ್ಷವಾಗೋ ಅತಿಥಿಗಳು ನಮಗೆ ಸರ್ ಪ್ರೈಸ್ ಕೊಡ್ತಾರೆ. ಅಮೆರಿಕದಲ್ಲೂ ಇದ್ದಕ್ಕಿದ್ದಂತೆ ಬಂದ ಅತಿಥಿಯೊಂದು ಮಹಿಳೆಯೊಬ್ಬಳಿಗೆ ಅಚ್ಚರಿ ಮಾತ್ರವಲ್ಲ ಆತಂಕವನ್ನೂ ಹುಟ್ಟಿಸಿದೆ. ಬ್ಲೂಸ್ಟೆಮ್ ಲೇಕ್ ಬಳಿ ವಾಸವಾಗಿದ್ದ ಮಹಿಳೆ ಜೂನ್ 2ರಂದು ಕಚೇರಿ ಮುಗಿಸಿ ಮನೆಗೆ ಬಂದವಳೇ ಅಕ್ಷರಶಃ ಬೆಚ್ಚಿ ಬಿದ್ದಿದ್ಲು.

ಅವಳ ಹಾಸಿಗೆ ಮೇಲೆ ಕೆರಳಿದ ಹಾವೊಂದು ಮಲಗಿತ್ತು. ಭಯದಿಂದ ಥರಗುಟ್ಟಿದ ಆಕೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಕೂಡಲೇ ಆಗಮಿಸಿದ ಪೊಲೀಸ್ ಅಧಿಕಾರಿ ಸ್ಟೀವ್ ಜಿಗ್ ಎಂಬಾತ ಹಾವನ್ನು ಸೇಫಾಗಿ ಹಿಡಿದಿದ್ದಾನೆ. 3 ಅಡಿ ಉದ್ದದ ಹಾವಿನ ಫೋಟೋವನ್ನು ಫೇಸ್ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ.

18893087_1389107674490885_5374902144693826595_n

ಮಹಿಳೆ ಹಾವನ್ನು ಓಡಿಸಲು ಪ್ರಯತ್ನಿಸಿದ್ದರಿಂದ ಅದು ಇನ್ನಷ್ಟು ಕೆರಳಿತ್ತು. ಬೂಟಿನಿಂದ ಹೊಡೆದು ಅದನ್ನು ಸಾಯಿಸಲು ಕೂಡ ಯತ್ನಿಸಿದ್ದಾಳೆ, ಆದ್ರೆ ಸಾಧ್ಯವಾಗಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಅದು ಕಚ್ಚೇ ಬಿಡುವ ಆತಂಕವಿತ್ತು ಅಂತಾ ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...