alex Certify
ಕನ್ನಡ ದುನಿಯಾ       Mobile App
       

Kannada Duniya

17 ವರ್ಷದ ಹಿಂದೆ ಸತ್ತ ಪತಿಯನ್ನು ಬಾತ್ ರೂಮಿನಲ್ಲಿ ನೋಡಿದ್ಲು ಪತ್ನಿ…!

ಅಮೆರಿಕಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಸಹಾಯ ವಾಣಿಗೆ ಮಹಿಳೆಯೊಬ್ಬಳು ಕರೆ ಮಾಡ್ತಾಳೆ. ನನ್ನ ಮನೆಗೆ ಯಾರೋ ಬಂದಿದ್ದಾರೆ. ಭಯವಾಗ್ತಿದೆ. ದಯವಿಟ್ಟು ಬನ್ನಿ ಎನ್ನುತ್ತಾಳೆ. ಸ್ಥಳದಲ್ಲಿ ಏನು ನಡೆಯುತ್ತಿದೆ ಎನ್ನೋದನ್ನು ಹೇಳ್ತಾ ಹೋಗು. ಕೆಲವೇ ಕ್ಷಣಗಳಲ್ಲಿ ನಮ್ಮದೊಂದು ತಂಡ ಅಲ್ಲಿಗೆ ಬರುತ್ತೆ ಅಂತಾ ಸಹಾಯವಾಣಿಯವರು ಹೇಳ್ತಾರೆ. ನಂತ್ರ ನಡೆದ ಮಾತುಕತೆ ಆಡಿಯೋ ವೈರಲ್ ಆಗಿದ್ದು, ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ವಾಸ್ತವವಾಗಿ ಮಹಿಳೆಯೊಬ್ಬಳೇ ಮನೆಯಲ್ಲಿ ವಾಸವಾಗಿದ್ದಾಳೆ. ಆಕೆ ಮೇಲಿನ ಮನೆಯಲ್ಲಿದ್ದು ಕೆಳಗೆ ಶೌಚಾಲಯವಿದೆ. ಮಹಿಳೆ ಸಹಾಯ ವಾಣಿಗೆ ಕರೆ ಮಾಡ್ತಿದ್ದಂತೆ ರೂಂನಲ್ಲಿರುವಂತೆ ಅಧಿಕಾರಿಗಳು ಸಲಹೆ ನೀಡ್ತಾರೆ. ಆದ್ರೆ ಬೆಕ್ಕು ಕೆಳಗೆ ಹೋಗಿದೆ. ಹಾಗಾಗಿ ತಾನೂ ಕೆಳಗೆ ಹೋಗ್ತೇನೆಂದು ಮಹಿಳೆ ಕೆಳಗೆ ಹೋಗ್ತಾಳೆ.

ಶೌಚಾಲಯದ ಬಳಿ ಬೆಕ್ಕು ನಿಂತಿರುತ್ತದೆ. ಶೌಚಾಲಯದೊಳಗೆ ನೋಡಿದ ಮಹಿಳೆ ಕಿರುಚಿಕೊಳ್ತಾಳೆ. ವ್ಯಕ್ತಿಯೊಬ್ಬ ಬೆತ್ತಲಾಗಿ ಬಾತ್ ಟಬ್ ನಲ್ಲಿ ಬಿದ್ದಿರುತ್ತಾನೆ. ಆತನ ಕಿವಿಯಿಂದ ರಕ್ತ ಬರುತ್ತಿರುತ್ತದೆ. ಈ ಎಲ್ಲವನ್ನೂ ಮಹಿಳೆ ಸಹಾಯ ವಾಣಿಗೆ ಹೇಳ್ತಾಳೆ. ಜೊತೆಗೆ ಆತನ ಕೈನಲ್ಲಿರುವ ಹಚ್ಚೆ ಹಾಗೂ ನನ್ನ ಪತಿ ಕೈ ಮೇಲಿದ್ದ ಹಚ್ಚೆ ಒಂದೆ. ಅಂದ್ರೆ ಈತ ನನ್ನ ಪತಿ ಎಂದ ಮಹಿಳೆ ಮತ್ತಷ್ಟು ಆತಂಕಗೊಳ್ತಾಳೆ.

ಯಾಕೆಂದ್ರೆ ಆಕೆ ಪತಿ ಸತ್ತು 17 ವರ್ಷವಾಗಿರುತ್ತದೆ. ಪತಿ ಸತ್ತಾಗ ಹೀಗಿರಲಿಲ್ಲ. ಈ ವ್ಯಕ್ತಿ ತುಂಬಾ ಚಿಕ್ಕವನಂತೆ ಕಾಣ್ತಾನೆಂದು ಮಹಿಳೆ ಹೇಳ್ತಾಳೆ. ತಕ್ಷಣ ಅಲ್ಲಿಗೆ ಬರುವ ಸಹಾಯವಾಣಿ ತಂಡ ಪೊಲೀಸರಿಗೆ ಕರೆ ಮಾಡುತ್ತದೆ. ಪೊಲೀಸರು ಸೇರಿದಂತೆ ತನಿಖಾ ತಂಡ ಅಲ್ಲಿಗೆ ಬಂದು ಪರಿಶೀಲನೆ ನಡೆಸುತ್ತದೆ. ಆ ವ್ಯಕ್ತಿ ಯಾರು? ಮಹಿಳೆಯ ಪತಿಯಾಗಿದ್ರೆ ಸತ್ತವನು ಇಲ್ಲಿಗೆ ಹೇಗೆ ಬಂದ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆಡಿಯೋ ಮಾತ್ರ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಅನೇಕ ಗೊಂದಲಗಳನ್ನು ಸೃಷ್ಟಿಸಿದೆ. ಆಡಿಯೋ ಕೇಳಿದ ಕೆಲವರು ಇದೆಲ್ಲ ಸುಳ್ಳು ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...