alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಚೇದನ ಸಿಕ್ಕಿದ್ದಕ್ಕೆ ಈಕೆ ಸಂಭ್ರಮಿಸಿದ್ದೇಗೆ ಗೊತ್ತಾ…?

ವಿವಾಹ ವಿಚ್ಛೇದನ ಮಂಜೂರು ಮಾಡುವ ಮುಂಚೆ ಸತಿ-ಪತಿ ಇಬ್ಬರೂ ಬಿಟ್ಟಿರಲು ಸಾಧ್ಯವೇ ಎಂದು ತಿಳಿದುಕೊಳ್ಳಲು ಒಂದಷ್ಟು ತಿಂಗಳು ಜೊತೆಯಾಗಿ ಬಾಳುವಂತೆ ಕಾಲಾವಕಾಶ ಕೊಡುತ್ತಾರೆ.

ಏಕೆಂದರೆ ಸಂಬಂಧವನ್ನು ಕಡಿದುಕೊಳ್ಳುವುದು ಅಷ್ಟು ಸುಲಭವಲ್ಲ. ಹೀಗಾಗಿ ಡೈವೋರ್ಸ್ ಬಳಿಕ ಅದೆಷ್ಟೋ ಜನ ಖಿನ್ನರಾಗುವುದೂ ಉಂಟು. ಆದರೆ ಡೈವೋರ್ಸನ್ನೂ ವಿಚಿತ್ರವಾಗಿ ಸಂಭ್ರಮಿಸಿದ ಈ ಮಹಿಳೆ ಅಂಥವರ ಮಧ್ಯೆ ಅಪವಾದ.

43 ವರ್ಷದ ಕಿಂಬೆರ್ಲೆ ಸ್ಯಾಂಟೆಲ್ಬೆನ್ ಎಂಬ ಅಮೆರಿಕದ ಮಹಿಳೆ ಡೈವೋರ್ಸ್ ಸಿಗುತ್ತಿದ್ದಂತೆ ಅದನ್ನೊಂದು ದೊಡ್ಡ ಬಿಡುಗಡೆ ಎಂಬಂತೆ ಸಂಭ್ರಮಿಸಿದ್ದಾರೆ. 14 ವರ್ಷದ ಹಿಂದೆ ಮದುವೆಯಾಗಿದ್ದಾಗ ತೊಟ್ಟಿದ್ದ ಉಡುಪನ್ನು ಆಕೆ ಗುಂಡಿಟ್ಟು ಸುಟ್ಟಿದ್ದಾಳೆ.

ತನ್ನ ಮನೆಯ ಹೊಲದಲ್ಲಿ ಆ ಉಡುಪಲ್ಲಿ ಸುಡುಮದ್ದನ್ನು ಇರಿಸಿ, ದೂರದಿಂದಲೇ ಅದಕ್ಕೆ ಶೂಟ್ ಮಾಡಿ ಸುಟ್ಟುಹಾಕಿದ್ದಾಳೆ. ಮಾತ್ರವಲ್ಲದೆ ಅದನ್ನು ಆಕೆಯ ಕುಟುಂಬ ಸದಸ್ಯರಿಂದ ವಿಡಿಯೊ ಚಿತ್ರೀಕರಣ ಮಾಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಆ ವಿಡಿಯೊ ವೈರಲ್ ಆಗಿದೆ.

ಅಂದಹಾಗೆ, ಆಕೆ ಹಾಗೆ ಮಾಡಿರುವುದಕ್ಕೂ ಕಾರಣ ಕೊಟ್ಟಿದ್ದಾಳೆ. ಆ ಉಡುಪು ಸುಳ್ಳನ್ನು ಪ್ರತಿನಿಧಿಸುತ್ತಿದೆ, ಅದಕ್ಕೇ ಅದನ್ನು ಸುಟ್ಟುಹಾಕಿದ್ದಾಗಿ ಆಕೆ ಸಮರ್ಥಿಸಿಕೊಂಡಿದ್ದಾಳೆ.

Posted by Carla Santleben-Newport on Saturday, November 10, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...