alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖವನ್ನೆಲ್ಲ ಕಚ್ಚಿ ಹಾಕಿದ್ದ ಹಾವಿನಿಂದ ಪಾರಾಗಲು ಮಹಿಳೆ ಮಾಡಿದ್ದೇನು?

snake

ಅಮೆರಿಕದ ಓಹಿಯೋ ನಗರದಲ್ಲಿ ಮಹಿಳೆಯೊಬ್ಬಳು ಮಾಡಿದ ಫೋನ್ ಕರೆ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಶೆಫೀಲ್ಡ್ ಲೇಕ್ ನಿವಾಸಿಯಾಗಿದ್ದ 45 ವರ್ಷದ ಮಹಿಳೆ ಹಾವೊಂದನ್ನು ರಕ್ಷಣೆ ಮಾಡಿದ್ಲು. ಆದ್ರೆ ಅದೇ ಹಾವಿನಿಂದ ಅವಳಿಗೆ ಕಂಟಕ ಎದುರಾಗಿತ್ತು.

5.6 ಅಡಿ ಉದ್ದವಿದ್ದ ಹಾವು ಮಹಿಳೆಯ ಮೈಗೆ ಬಿಗಿಯಾಗಿ ಸುತ್ತಿಕೊಂಡಿತ್ತು. ನಿಧಾನವಾಗಿ ಅವಳ ಮುಖದ ಮೇಲೆ ದಾಳಿ ನಡೆಸಲಾರಂಭಿಸಿತ್ತು. ಅವಳ ಮೂಗನ್ನು ಕಚ್ಚಿ ಹಾಕಿತ್ತು. ಮುಖದಿಂದ ರಕ್ತ ಸುರಿಯುತ್ತಿತ್ತು, ಎಷ್ಟೇ ಕಸರತ್ತು ಮಾಡಿದ್ರೂ ಮಹಿಳೆಗೆ ಹಾವಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕೊನೆಗೆ ಆಕೆ ಪೊಲೀಸರಿಗೆ ಕರೆ ಮಾಡಿದ್ದಾಳೆ. ಹಾವು ತನ್ನ ಮುಖವನ್ನೆಲ್ಲ ಕಚ್ಚಿ ಹಾಕ್ತಿದೆ ಬೇಗ ಬನ್ನಿ ಅಂತಾ ಮನವಿ ಮಾಡಿದ್ದಾಳೆ. ಕೂಡಲೇ ಧಾವಿಸಿ ಬಂದ ಪೊಲೀಸರು ಹಾವಿನ ಹಿಡಿತದಿಂದ ಮಹಿಳೆಯನ್ನು ಬಚಾವ್ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗ್ತಿದೆ. ಇಂಥದ್ದೊಂದು ಕರೆ ಬಂದಿದ್ದು ಇದೇ ಮೊದಲ ಬಾರಿ ಅಂತಾ ಪೊಲೀಸರು ತಿಳಿಸಿದ್ದಾರೆ. ಅಂಥ ಸನ್ನಿವೇಶದಲ್ಲೂ ಹೆದರದೆ ಮಹಿಳೆ ಕರೆ ಮಾಡಿದ್ದು ವಿಶೇಷ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...