alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಜ್ಜಾ ಕೊಡಲು ತಡ ಮಾಡಿದ್ದಕ್ಕೆ ಪೊಲೀಸರನ್ನು ಕರೆದ್ಲು ಮಹಿಳೆ

ಕೆನಡಾದ ಈ ಮಹಿಳೆಗೆ ಅದೆಷ್ಟು ಹೊಟ್ಟೆ ಹಸಿವಾಗಿತ್ತೋ ಏನೋ. ತನ್ನ ಮಗನೊಂದಿಗೆ ರೆಸ್ಟೋರೆಂಟ್ ಗೆ ಹೋಗಿದ್ದ ಆಕೆ, ಪಿಜ್ಜಾ ಕೊಡಲು ತಡ ಮಾಡಿದರೆಂಬ ಕಾರಣಕ್ಕೆ ಪೊಲೀಸರನ್ನೇ ಸ್ಥಳಕ್ಕೆ ಕರೆಸಿದ್ದಾಳೆ.

ಸೋಮವಾರ ರಾತ್ರಿ ಒಂಟಾರಿಯೋ ದಲ್ಲಿ ಈ ಘಟನೆ ನಡೆದಿದ್ದು, ತನ್ನ ಹತ್ತು ವರ್ಷದ ಪುತ್ರನೊಂದಿಗೆ ರೆಸ್ಟೋರೆಂಟ್ ಗೆ ಬಂದ 32 ವರ್ಷದ ಮಹಿಳೆ ಪಿಜ್ಜಾ ಆರ್ಡರ್ ಮಾಡಿದ್ದಾಳೆ. ಆದರೆ ಎಷ್ಟು ಹೊತ್ತಾದರೂ ಅದನ್ನು ತಂದು ಕೊಟ್ಟಿಲ್ಲ.

ಇದರಿಂದ ರೋಸತ್ತ ಮಹಿಳೆ ನೇರವಾಗಿ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ 911 ಗೆ ಕರೆ ಮಾಡಿದ್ದಾಳೆ. ಯಾರೋ ಭಾರೀ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆಂದು ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು ಮಹಿಳೆಯ ಸಮಸ್ಯೆ ಕೇಳಿ ದಂಗಾಗಿದ್ದಾರೆ.

ಬಳಿಕ ಆಕೆಗೆ ತುರ್ತು ಸಹಾಯವಾಣಿ ಇರುವುದು ಕಷ್ಟದಲ್ಲಿರುವವರ ಸಹಾಯಕ್ಕೆ ಹೊರತು ನಿನ್ನ ಪಿಜ್ಜಾ ಸಮಸ್ಯೆ ಬಗೆಹರಿಸಲು ಅಲ್ಲ ಎಂದು ಬುದ್ಧಿ ಹೇಳಿ ಅಲ್ಲಿಂದ ತೆರಳಿದ್ದಾರೆ. ಜೊತೆಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...