alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಂಬುಲೆನ್ಸ್’ ಗೆ ಈಕೆ ಕರೆ ಮಾಡಿದ್ದೇಕೆ ಅಂತ ಕೇಳಿದ್ರೆ ‘ಶಾಕ್’ ಆಗ್ತೀರಾ…!

ಪೊಲೀಸರಿಗೆ ಎಷ್ಟೋ ಬಾರಿ ಹುಸಿ ಕರೆಗಳು ಬರುತ್ತವೆ. ಬಾಂಬ್ ಇಟ್ಟಿರೋದಾಗಿ ಬೆದರಿಕೆ ಹಾಕುವವರ ಸಂಖ್ಯೆಯೇ ಹೆಚ್ಚು. ಇನ್ನು ಕೆಲವರು  ಆಂಬ್ಯುಲೆನ್ಸ್ ಅನ್ನೇ ಕರೆಸಿ ಸಿಬ್ಬಂದಿಯನ್ನು ಬೇಸ್ತು ಬೀಳಿಸಿ ಮಜಾ ತೆಗೆದುಕೊಳ್ತಾರೆ.

ಆದ್ರೆ ಬ್ರಿಟನ್ ನ ನಾಟಿಂಗ್ಹ್ಯಾಮ್ ನಲ್ಲಿ ಮಹಿಳೆಯೊಬ್ಬಳು ಮೊಟ್ಟೆ ಒಡೆದಿದೆ ಅನ್ನೋ ಕ್ಷುಲ್ಲಕ ಕಾರಣಕ್ಕೆ ಆಂಬ್ಯುಲೆನ್ಸ್ ಕರೆಸಿದ್ದಾಳೆ. ಜನವರಿ 23ರಂದು ಈ ಘಟನೆ ನಡೆದಿದೆ. ದಿ ಈಸ್ಟ್ ಮಿಡ್ ಲ್ಯಾಂಡ್ಸ್ ಆಂಬ್ಯುಲೆನ್ಸ್ ಸರ್ವೀಸ್ ಗೆ ಮಹಿಳೆ ಕರೆ ಮಾಡಿದ್ದಳು.

ಫ್ರಿಡ್ಜ್ ನಲ್ಲಿ ಒಂದು ಬಾಕ್ಸ್ ತುಂಬಾ ಮೊಟ್ಟೆಗಳನ್ನಿಟ್ಟಿದ್ದೆ, ಅದರಲ್ಲಿ ಒಂದು ಮೊಟ್ಟೆ ಒಡೆದು ಹೋಗಿದೆ. ಹಾಗಾಗಿ ಅದನ್ನೆಲ್ಲ ಬಾಕ್ಸ್ ನ ಮುಚ್ಚಳಕ್ಕೆ ಶಿಫ್ಟ್ ಮಾಡಿದೆ. ಬಾಕ್ಸ್ ರಾತ್ರಿಯಿಡೀ ಓಪನ್ ಆಗಿಯೇ ಇತ್ತು. ಫ್ರಿಡ್ಜ್ ನಲ್ಲಿ ಈ ರೀತಿ ಮೊಟ್ಟೆಯ ಡಬ್ಬದ ಮುಚ್ಚಳ ತೆಗೆದು ಇಡಬಹುದಾ ಅಂತ ಪ್ರಶ್ನಿಸಿದ್ದಾಳೆ.

ಮಹಿಳೆಯ ಪ್ರಶ್ನೆ ಕೇಳಿ ತುರ್ತು ಸೇವೆಯ ಸಿಬ್ಬಂದಿ ಶಾಕ್ ಆಗಿದ್ದಾರೆ. ಈ ಆಡಿಯೋವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದು, ಇಂತಹ ಕ್ಷುಲ್ಲಕ ಕಾಣಕ್ಕೆ ಕರೆ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದು ತುರ್ತು ಸಂದರ್ಭಗಳಿಗಾಗಿ ಇರುವ ಸೇವೆ ಅಂತಾನೂ ಸ್ಪಷ್ಟಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...