alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಫಾದಲ್ಲಿ ಭೂತ ಇದೆ ಎಂದು ಬೆಂಕಿ ಹಚ್ಚಿದ ಮಹಿಳೆ

ಅಮೆರಿಕದಂತಹ ದೇಶಗಳಲ್ಲೂ ಭೂತೋಚ್ಛಾಟನೆ, ವಾಮಾಚಾರದಂತಹ ಕಾರ್ಯಗಳು ನಡೆಯುತ್ತದೆ ಎಂದರೆ ನಂಬುವುದೇ ಕಷ್ಟ. ಲೂಸಿಯಾನದಲ್ಲಿ 53 ವರ್ಷದ ಮಹಿಳೆಯೊಬ್ಬಳು ಭೂತೋಚ್ಛಾಟನೆಯ ಭರದಲ್ಲಿ ತನ್ನ ಮನೆಯನ್ನೇ ಬೆಂಕಿಗೆ ಆಹುತಿ ಮಾಡಿದ್ದಾಳೆ.

ತನ್ನ ಮನೆಯಲ್ಲಿರುವ ಸೋಫಾದಲ್ಲಿ ಭೂತವಿದೆ ಎಂದು ಭ್ರಮೆಗೊಳಗಾದ ಜೋಲಿನ್‌ ವಿನ್‌ ಎಂಬ ಮಹಿಳೆ, ಭೂತೋಚ್ಛಾಟನೆಯ ತಂತ್ರಗಳನ್ನು ನಡೆಸಿ ಸೋಫಾಕ್ಕೆ  ಬೆಂಕಿ ಹಚ್ಚಿದ್ದಾಳೆ.

ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ. ಹೊಗೆಯಿಂದ ತುಂಬಿಕೊಂಡಿದ್ದ ಮನೆಯೊಳಗೆ ಜೋಲಿನ್‌ನ್ನು ರಕ್ಷಿಸಿದ ಅಗ್ನಿಶಾಮಕ ಅಧಿಕಾರಿಗಳು, ಆಕೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಪರಿಶೀಲನೆ ನಡೆಸಿದಾಗ ಸೋಫಾಕ್ಕೆ ಬೆಂಕಿ ಹಚ್ಚಿರುವುದು ಗೊತ್ತಾಗಿದೆ. ವಿಚಾರಣೆ ವೇಳೆ ಸೋಫಾದಲ್ಲಿ ಕುಳಿತು ಉಪಟಳ ನೀಡುತ್ತಿದ್ದ ಪ್ರೇತದಿಂದ ಮುಕ್ತಿ ಕಾಣಲು ಈ ರೀತಿ ಮಾಡಿದ್ದಾಗಿ ಜೋಲಿನ್ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...