alex Certify
ಕನ್ನಡ ದುನಿಯಾ       Mobile App
       

Kannada Duniya

ವಜಿನಾ ಇಲ್ಲದೆ ಜನಿಸಿದ್ದ ಮಹಿಳೆ ಮೊದಲ ಬಾರಿ ಬೆಳೆಸಿದ್ಲು ಸಂಬಂಧ

ಆಕೆ ವಯಸ್ಸು 23. ಜೀವನದಲ್ಲಿ ಇದೇ ಮೊದಲ ಬಾರಿ ಆಕೆ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ. ಅದ್ರಲ್ಲೇನು ವಿಶೇಷ ಎನ್ನಬೇಡಿ. ಆಕೆ ವಿಚಾರದಲ್ಲಿ ಇದೇ ಮಹತ್ವದ ಸಾಧನೆ. 23 ವರ್ಷವಾದ್ರೂ ಆಕೆ ಸಂಪೂರ್ಣ ಸ್ತ್ರೀಯಾಗಿರುವ ಅನುಭವ ಪಡೆದಿರಲಿಲ್ಲವಂತೆ.

ಬ್ರೆಜಿಲಿಯನ್ ಜಾಕ್ವೆಲಿನ್ ಮರಿನ್ಹೋ, ವಜಿನಾ ಇಲ್ಲದೆ ಜನಿಸಿದ್ದಳು. ವಿಚಿತ್ರ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ವೈದ್ಯರು ಮೆಡಿಕಲ್ ಸ್ಟಡಿ ಪ್ಲಸ್ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ವಜಿನಾ ಅಳವಡಿಸಿದ್ದಾರೆ. ಮೂರು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಜಾಕ್ವೆಲಿನ್ 15 ವರ್ಷದಲ್ಲಿದ್ದಾಗ ತನ್ನ ದೇಹದಲ್ಲಿ ಮಹತ್ವದ ಅಂಗವೊಂದಿಲ್ಲ ಎಂಬ ಸಂಗತಿ ಆಕೆಗೆ ಗೊತ್ತಾಯ್ತಂತೆ. ಆದ್ರೆ ಬೇರೆಲ್ಲ ಭಾಗ ಸ್ತ್ರೀಯಂತೆ ಬೆಳವಣಿಗೆಯಾಗ್ತಿತ್ತಂತೆ. ಇದನ್ನು ನೋಡಿ ವೈದ್ಯರೂ ಆಶ್ಚರ್ಯಕ್ಕೊಳಗಾಗಿದ್ದರಂತೆ. ಆಕೆಗೆ ಮುಟ್ಟಿನ ನೋವು ಕಾಡ್ತಿತ್ತಂತೆ. ಆದ್ರೆ ಎಂದೂ ಮುಟ್ಟಾಗಲಿಲ್ಲವಂತೆ.

ಚಿಕಿತ್ಸೆ ವೇಳೆ ಜಾಕ್ವೆಲಿನ್ ಗೆ ವಜಿನಾ ಬೆಳವಣಿಗೆಯಾಗಲಿಲ್ಲ ಎಂಬುದು ಗೊತ್ತಾಗಿದೆ. ವಿಶೇಷ ಮೀನೊಂದರ ಚರ್ಮ ಬಳಸಿ ವಜಿನಾವನ್ನು ಜೋಡಿಸಿದ್ದಾರೆ. ಇದ್ರಿಂದ ಜಾಕ್ವೆಲಿನ್ ತುಂಬಾ ಖುಷಿಯಾಗಿದ್ದಾಳೆ. ಸಂಪೂರ್ಣ ಸ್ತ್ರೀ ಆಗಿರುವ ಅನುಭವ ಖುಷಿ ನೀಡ್ತಿದೆ. ಜೀವನವನ್ನು ಎಂಜಾಯ್ ಮಾಡ್ತಿದ್ದೇನೆ. ನನ್ನ ಸೆಕ್ಸ್ ಜೀವನ ಕೂಡ ಚೆನ್ನಾಗಿದೆ ಎಂದು ಜಾಕ್ವೆಲಿನ್ ಹೇಳಿದ್ದಾಳೆ. ಮೂರು ತಿಂಗಳ ವಿಶ್ರಾಂತಿ ನಂತ್ರ ನಾರ್ಮಲ್ ಬದುಕಿಗೆ ಬಂದಿರುವ ಜಾಕ್ವೆಲಿನ್ ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ ಖುಷಿಯಲ್ಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...