alex Certify
ಕನ್ನಡ ದುನಿಯಾ       Mobile App
       

Kannada Duniya

ಮುಗ್ದ ಮಗುವಿಗೆ ಲೈಂಗಿಕ ಶೋಷಣೆ ನೀಡಿ ವಿಡಿಯೋ ಮಾಡಿದ್ಲು ಮಹಿಳೆ

ವಿವಾಹಿತ ಮಹಿಳೆಯೊಬ್ಬಳು ನಾಲ್ಕು ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಅದ್ರ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾಳೆ. ಆಘಾತಕಾರಿ ಘಟನೆ ನಡೆದಿರುವುದು ಅಮೆರಿಕಾದಲ್ಲಿ. 25 ವರ್ಷದ ಕೈಲೀ ಮೇರಿಗೆ ಸ್ಥಳೀಯ ಕೋರ್ಟ್ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಕೋರ್ಟ್ ಮಾಹಿತಿ ಪ್ರಕಾರ, 2016 ರಲ್ಲಿ ಮಹಿಳೆ ಪಕ್ಕದ ಮನೆ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಳು. ಅದ್ರ ವಿಡಿಯೋವನ್ನು ಆಕೆ ಮಾಡಿದ್ದಳು. ನಂತ್ರ ವಿಡಿಯೋವನ್ನು ಔಷಧ ವ್ಯಾಪಾರಿ ನಾಥನ್ ಓಸ್ಬೋರ್ನ್ ಗೆ ಕಳುಹಿಸಿದ್ದಳು. ಈ ವಿಡಿಯೋ ನಂತ್ರ ವೈರಲ್ ಆಗಿತ್ತು.

ಪೊಲೀಸ್ ವಿಚಾರಣೆ ವೇಳೆ ಮಹಿಳೆ ತಪ್ಪೊಪ್ಪಿಕೊಂಡಿದ್ದಳು. ಮನೆ ಪಕ್ಕದಲ್ಲಿಯೇ ಮಗು ಪಾಲಕರು ವಾಸವಾಗಿದ್ದಾರೆಂದು ಆಕೆ ಹೇಳಿದ್ದಳು. ಜನವರಿ 11ರಂದು ಫೆಡರರ್ ಕೋರ್ಟ್ ಈ ಪ್ರಕರಣದ ತೀರ್ಪು ನೀಡಿದೆ. ಆರೋಪಿ ಮಹಿಳೆಗೆ 20 ವರ್ಷ ಜೈಲು ಶಿಕ್ಷೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...