alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ…! ಕಚ್ಚಿದ ಹಾವನ್ನೇ ಕೈಗೆ ಸುತ್ತಿಕೊಂಡು ಬಂದ್ಲು ಯುವತಿ

ಸಾಮಾನ್ಯವಾಗಿ ಹಾವು ಕಚ್ಚಿದ ವೇಳೆ ಎಲ್ಲರೂ ಏನು ಮಾಡ್ತಾರೆ…? ಆ ಕ್ಷಣಕ್ಕೆ ತೀವ್ರ ಭಯಕ್ಕೊಳಗಾಗುತ್ತಾರೆ….ಜೊತೆಗೆ ಸಹಾಯಕ್ಕಾಗಿ ಕೂಗಾಡುತ್ತಾರೆ. ಆದ್ರೆ, ಚೀನಾದ ಓರ್ವ ಯುವತಿ ಮಾಡಿದ ಕಾರ್ಯವನ್ನು ಕೇಳಿದ್ರೆ ಎದೆ ನಡುಗದೆ ಇರದು.

ಈ ಯುವತಿ ತನಗೆ ಕಚ್ಚಿದ ಹಾವನ್ನು ಕೈಗೆ ಸುತ್ತಿಕೊಂಡು ಆಸ್ಪತ್ರೆಗೆ ಬಂದಿದ್ದಾಳೆ. ಹಾವಿನ ತಲೆಯನ್ನು ಎರಡು ಬೊಟ್ಟುಗಳಲ್ಲಿ ಅದುಮಿ ಹಿಡಿದಿರುವ ದೃಶ್ಯ ಸದ್ಯ ವೈರಲ್ ಆಗ್ತಾ ಇದೆ. ಸುಮಾರು 1.5 ಮೀಟರ್ ಉದ್ದದ ಹಾವನ್ನು ಯುವತಿ ತನ್ನ ಮುಂಗೈಯಲ್ಲಿ ಸುತ್ತಿಕೊಂಡು ಬಂದಿರೋದನ್ನು ನೋಡಿದ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳು ನಿಬ್ಬೆರಗಾಗಿದ್ದಾರೆ. ಅಲ್ಲದೇ ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದಾರೆ.

ಆಸ್ಪತ್ರೆಗೆ ದಾಖಲಾದ ಯುವತಿಯನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ತನ್ನ ಕೈಗೆ ಸುತ್ತಿಕೊಂಡಿದ್ದ ಹಾವನ್ನು ಒಂದು ಬಾಟಲ್ ನಲ್ಲಿ ಹಾಕುತ್ತಿರುವ ದೃಶ್ಯ ನೋಡುಗರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...