alex Certify
ಕನ್ನಡ ದುನಿಯಾ       Mobile App
       

Kannada Duniya

‘ಲಿಪ್ ಲಾಕ್’ನಲ್ಲಿ ಯುವತಿಯಿಂದಾಯ್ತು ಅನಾಹುತ !

lip toung

‘ಮುತ್ತಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು’ ಈ ಮಾತಿಗೆ ಉದಾಹರಣೆ ಎನ್ನಬಹುದಾದ ಘಟನೆಯೊಂದು ನಡೆದಿದ್ದು, ಅಚ್ಚರಿಗೆ ಕಾರಣವಾಗಿದೆ. ಬಾಯ್ ಫ್ರೆಂಡ್ ಗೆ ಮುತ್ತು ಕೊಡುವ ಸಂದರ್ಭದಲ್ಲಿ ಯುವತಿಯೊಬ್ಬಳು ಅನಾಹುತಕ್ಕೆ ಕಾರಣವಾಗಿದ್ದಾಳೆ.

ಅಮೆರಿಕದ ಕನೆಕ್ಟ್ರಿಕಟ್ ಎಂಬಲ್ಲಿ ಪ್ರೇಮಿಗಳಿಬ್ಬರು ಬಹಳ ದಿನಗಳ ನಂತರ ಸೇರಿದ್ದು, ಇದೇ ಸಂಭ್ರಮದಲ್ಲಿ ದೀರ್ಘವಾಗಿ ಚುಂಬಿಸಿದ್ದಾರೆ. ಆದರೆ, ಹೀಗೆ ದೀರ್ಘ ಚುಂಬನದಲ್ಲಿ ಮೈಮರೆತ ಯುವತಿ ಪ್ರೇಮಿಯ ನಾಲಿಗೆಯನ್ನೇ ತುಂಡರಿಸಿದ್ದಾಳೆ. ಶೇಕಿಯಾ ಲಾಂಗ್ ಹಾಗೂ ಡ್ವೇನ್ ವಿಲಿಯಮ್ಸ್ ಬಹುದಿನಗಳಿಂದ ಪ್ರೀತಿಸುತ್ತಿದ್ದರು. ಈ ನಡುವೆ ಇಬ್ಬರಿಗೂ ಭೇಟಿಯಾಗಿರಲು ಸಾಧ್ಯವಾಗಿರಲಿಲ್ಲ. ಬಹಳ ದಿನಗಳ ನಂತರ ಸಿಕ್ಕ ಪ್ರೇಮಿಗಳಿಬ್ಬರು ಮುತ್ತಿನ ಮತ್ತಿನಲ್ಲಿ ಮೈಮರೆತಿದ್ದಾರೆ.

ಈ ವೇಳೆ ಆಕೆ ವಿಲಿಯಮ್ಸ್ ನಾಲಿಗೆಯನ್ನು ಕಚ್ಚಿದ್ದು, ಅದು ತುಂಡಾಗಿದೆ. ಇದರಿಂದ ದಿಕ್ಕು ತೋಚದಂತಾದ ವಿಲಿಯಮ್ಸ್ ನಾಲಿಗೆಯನ್ನು ಕೈಯಲ್ಲಿಡಿದುಕೊಂಡೇ ಆಸ್ಪತ್ರೆಗೆ ಓಡಿದ್ದಾನೆ. ದಾರಿಯಲ್ಲಿ ಪೊಲೀಸ್ ಏಕೆ ಹೀಗೆ ಓಡುತ್ತಿರುವೆ ಎಂದು ಪ್ರಶ್ನಿಸಿದ್ದು, ಆಗ ತೊದಲುತ್ತಾ ನಡೆದ ಘಟನೆಯನ್ನು ವಿವರಿಸಿದ್ದಾನೆ.

ಪೊಲೀಸ್ ಶೇಕಿಯಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆಕೆ ಮಾದಕವಸ್ತು ಸೇವಿಸಿದ್ದಳು ಎಂಬುದು ಗೊತ್ತಾಗಿದೆ. ಮಾದಕ ವಸ್ತು ಹಾಗೂ ಮತ್ತು ಬರುವ ಮುತ್ತಿನಿಂದ ಆಕೆ ಬಾಯ್ ಫ್ರೆಂಡ್ ನಾಲಿಗೆಯನ್ನೇ ತುಂಡರಿಸಿದ್ದಾಳೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...