alex Certify
ಕನ್ನಡ ದುನಿಯಾ       Mobile App
       

Kannada Duniya

ಆಟಿಕೆ ಎಂದುಕೊಂಡು ಹಾವನ್ನೇ ಹಿಡಿದ ಮಹಿಳೆ ಮಾಡಿದ್ದೇನು?

woman-accidentally-picks-up-baby-snake_650x400_81497867415

ಕ್ಯಾಲಿಫೋರ್ನಿಯಾದಲ್ಲಿ ತಮಾಷೆಯ ಘಟನೆಯೊಂದು ನಡೆದಿದೆ. ರಾತ್ರಿ ಮಹಿಳೆಯೊಬ್ಳು ಯಾರ ಜೊತೆಗೋ ಮಾತನಾಡುತ್ತ ಮನೆಯ ಹೊರಗಡೆ ನಿಂತಿದ್ಲು. ನಂತರ ಮನೆಯೊಳಕ್ಕೆ ಹೋಗಲು ಗೇಟ್ ಬಳಿ ಬಂದಿದ್ದಾಳೆ. ಗೇಟ್ ಪಕ್ಕದಲ್ಲೇ ಬಿದ್ದಿದ್ದ ವಸ್ತುವೊಂದನ್ನು ನೋಡಿ, ತನ್ನ ನಾಯಿಯ ಆಟಿಕೆ ಎಂದುಕೊಂಡಿದ್ದಾಳೆ.

ಅದನ್ನು ತೆಗೆದುಕೊಳ್ಳಲು ಕೈಹಾಕಿದವಳು, ಬೆಚ್ಚಿಬಿದ್ದಿದ್ಲು. ಅದನ್ನು ಅಲ್ಲೇ ಬಿಸಾಡಿ ಹೆದರಿ ಓಡಿದ್ದಾಳೆ. ತನ್ನ ಮಾಲಕಿಗೆ ಏನಾಯ್ತು ಅಂತಾ ನೋಡಲು ಬಂದಿದ್ದ ಜರ್ಮನ್ ಶೆಫರ್ಡ್ ನಾಯಿ ಕೂಡ ಅವಳ ಜೊತೆಗೇ ಅಲ್ಲಿಂದ ಕಾಲ್ಕಿತ್ತಿತ್ತು.

ಅಷ್ಟಕ್ಕೂ ಶ್ವಾನದ ಆಟಿಕೆ ಎಂದುಕೊಂಡು ಮಹಿಳೆ ಕೈಯಲ್ಲಿ ಹಿಡಿದಿದ್ದ ವಸ್ತು ಏನ್ ಗೊತ್ತಾ? ಹಾವು. ಹೌದು, ಗೇಟಿನ ಬಳಿ ಮಲಗಿದ್ದ ಹಾವಿನ ಮರಿಯನ್ನು ಆಟಿಕೆ ಎಂದುಕೊಂಡು ಮಹಿಳೆ ತೆಗೆದುಕೊಂಡಿದ್ಲು. ಹಾವು ಅನ್ನೋದು ಅನುಭವಕ್ಕೆ ಬರ್ತಿದ್ದಂತೆ ಅಲ್ಲೇ ಬಿಸಾಡಿ ಓಡಿ ಹೋಗಿದ್ದಾಳೆ.

ಕೊನೆಗೆ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಹಾವಿನ ಮರಿಯನ್ನು ಅಲ್ಲಿಂದ ತೆರವು ಮಾಡಲಾಯ್ತು. ಈ ವಿಡಿಯೋ ಯುಟ್ಯೂಬ್ ನಲ್ಲಿ ಅಪ್ ಲೋಡ್ ಆಗಿದೆ. ವಿಡಿಯೋ ಸಖತ್ ಫನ್ನಿಯಾಗಿದ್ರೂ ಅದೊಂದು ಭಯಾನಕ ಅನುಭವ ಅಂತಾ ಆ ಮಹಿಳೆಯ ಪತಿ ಹೇಳಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...