alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆಯ ಫೋಟೋ ನೋಡಿದ್ರೆ ಬೆಚ್ಚಿ ಬೀಳ್ತಾರೆ ಮಕ್ಕಳು

ಇವಾ ಟಿಮಾತ್ ಮೆಡುಸಾ ಎಂಬ ತೃತೀಯ ಲಿಂಗಿ ಮಹಿಳೆ ಅಮೆರಿಕದ ಟೆಕ್ಸಾಸ್ ನವಳು. ಇನ್ ಸ್ಟಾಗ್ರಾಮ್ನಲ್ಲಿ ಅವಳಿಗೆ 6000 ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಅವಳ ಫೋಟೋಗಳನ್ನು ನೋಡಿದ್ರೆ ಮಕ್ಕಳಂತೂ ಹೆದರಿ ಹೋಗ್ತಾರೆ.

ಅಷ್ಟು ಭಯಂಕರವಾಗಿದ್ದಾಳೆ ಇವಾ. ಎಲ್ಲರೂ ಸೆಲೆಬ್ರಿಟಿಗಳಂತೆ ಸುಂದರವಾಗಿ ಕಾಣಲು ಹಣ ಖರ್ಚು ಮಾಡ್ತಾರೆ. ಆದ್ರೆ ಇವಾಗೆ ಡ್ರ್ಯಾಗನ್ ನಂತೆ ಕಾಣಬೇಕು ಅನ್ನೋ ಆಸೆ.

ಇದಕ್ಕಾಗಿ ಮೈತುಂಬಾ ಟ್ಯಾಟೂ ಹಾಕಿಸಿಕೊಂಡು, ಚಿತ್ರ ವಿಚಿತ್ರ ವೇಷ ಮಾಡಿಸಿಕೊಂಡಿದ್ದಾಳೆ. ಇದಕ್ಕಾಗಿ ಅವಳು ಖರ್ಚು ಮಾಡಿರೋದು ಸರಿಸುಮಾರು 36,61,680 ರೂಪಾಯಿ. ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ಆಕೆ ಉಪಾಧ್ಯಕ್ಷೆಯಾಗಿದ್ಲು.

ಈ ಡ್ರ್ಯಾಗನ್ ಹುಚ್ಚಿಗೆ ಬಿದ್ದು ಕೆಲಸ ಬಿಟ್ಟಿದ್ದಾಳೆ. ಮೊದಲು ಮೂಗನ್ನು ರಿ ಶೇಪ್ ಮಾಡಿಸಿಕೊಂಡ್ಲು. ಕಣ್ಣಿಗೆ ಟ್ಯಾಟೂ ಹಾಕಿಸಿದ್ಲು. ಅದಾದ್ಮೇಲೆ ಕಿವಿಗಳನ್ನೇ ಕತ್ತರಿಸಿಕೊಂಡ್ಲು.

ಈ ರೀತಿ ಸಂಪೂರ್ಣವಾಗಿ ತನ್ನ ದೇಹವನ್ನು ರೂಪಾಂತರ ಮಾಡಿಕೊಂಡಿದ್ದಾಳೆ. 5 ವರ್ಷದವಳಿದ್ದಾಗಲೇ ಹೆತ್ತವರು ಅವಳನ್ನು ಬಿಟ್ಟು ಹೋಗಿದ್ದಾರಂತೆ. ಆಗ ತಾನು ಹಾವಿನ ಜೊತೆಗೆ ವಾಸವಾಗಿದ್ದೆ ಅಂತೆಲ್ಲಾ ಹೇಳಿಕೊಳ್ಳುತ್ತಾಳೆ.

ಒಬ್ಬಳು ಜನ್ಮ ಕೊಟ್ಟ ತಾಯಿಯಾದ್ರೆ, ಇನ್ನೊಂದು ಹಾವು ಕೂಡ ತನ್ನ ತಾಯಿ ಎನ್ನುತ್ತಾಳೆ ಇವಾ. ಹಣೆಯ ಮೇಲೆ ದೊಡ್ಡ ಬೊಬ್ಬೆಗಳು, ಎರಡು ತುಂಡಾದ ನಾಲಿಗೆ, ಬಿಳಿ ಕುರುಚಲು ಗಡ್ಡ ಇವನ್ನೆಲ್ಲ ನೋಡಿದ್ರೆ ಎಲ್ರೂ ಬೆಚ್ಚಿಬೀಳ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...