alex Certify
ಕನ್ನಡ ದುನಿಯಾ       Mobile App
       

Kannada Duniya

30 ವರ್ಷದಿಂದ ಕಾರು ಚಲಾಯಿಸುವುದನ್ನು ಕಲಿಯುತ್ತಿದ್ದಾಳೆ ಈಕೆ..!

lisa_20161010_18949_10_10_2016ಸಾಮಾನ್ಯವಾಗಿ ಎಲ್ಲರೂ ಕೆಲವೇ ತಿಂಗಳಲ್ಲಿ ಡ್ರೈವಿಂಗ್ ಕಲಿಯುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಕಳೆದ 30 ವರ್ಷದಿಂದ ಕಾರು ಚಲಾಯಿಸುವುದನ್ನು ಕಲಿಯುತ್ತಿದ್ದಾಳೆ. ಆದರೆ ಆಕೆಗೆ ಇಂದಿಗೂ ಕಾರ್ ಡ್ರೈವ್ ಮಾಡಲು ಸಾಧ್ಯವಾಗುತ್ತಿಲ್ಲ.

ಲಿಸಾ ಬ್ರಿಂಕ್ ವರ್ಥ್ ಎಂಬ ಈ ಮಹಿಳೆ ಕಳೆದ 30 ವರ್ಷದಿಂದ ಕಾರು ಚಲಾಯಿಸುವುದನ್ನು ಕಲಿಯುತ್ತಿದ್ದಾಳೆ. ಈಗ 49 ವರ್ಷದವಳಾಗಿರುವ ಲಿಸಾಗೆ ಇಂದಿಗೂ ಡ್ರೈವಿಂಗ್ ಎಂಬುದು ಬಿಡಿಸಲಾಗದ ಕಗ್ಗಂಟಾಗಿದೆ. ಇದಕ್ಕೆ ಕಾರಣ ಇವಳಿಗಿರುವ Psudoneglet ಎಂಬ ಕಾಯಿಲೆ.

Psudoneglet ಕಾಯಿಲೆ ಇರುವ ಕಾರಣ ಇವಳಿಗೆ ಎಡ ಮತ್ತು ಬಲ ಬದಿಯ ಜಡ್ಜ್ಮೆಂಟ್ ಸಿಗುವುದಿಲ್ಲ. ಇದರಿಂದಾಗಿಯೇ ಇವಳು ಡ್ರೈವಿಂಗ್ ಕಲಿಯುವ ವೇಳೆ ಅನೇಕ ಬಾರಿ ಕಾರನ್ನು ಅಪಘಾತಕ್ಕೀಡು ಮಾಡಿದ್ದಾಳೆ.  ಹಾಗಾಗಿ ಲಿಸಾ ಪಾಲಕರು, ಅವಳಿಗೆ ಕಾರನ್ನು ಚಲಾಯಿಸದಿರುವಂತೆ ಹೇಳಿದ್ದಾರೆ. Psudoneglet ಕಾಯಿಲೆಯಿಂದ ಬಳಲುತ್ತಿರುವವರ ಆಯಸ್ಸು ಹೆಚ್ಚಾದಂತೆ ಈ ಲಕ್ಷಣ ಕ್ಷೀಣಿಸುತ್ತದೆಯಂತೆ. ಹಾಗಾಗಿ ಲಿಸಾ ತನಗೆ 70 ವರ್ಷವಾದ ಬಳಿಕವಾದರೂ ಕಾರು ಓಡಿಸಲು ಸಾಧ್ಯವಾಗಬಹುದೆಂಬ ನಿರೀಕ್ಷೆ ಹೊಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...