alex Certify
ಕನ್ನಡ ದುನಿಯಾ       Mobile App
       

Kannada Duniya

ಗುಂಡು ಹಾರಿಸಿದ್ದ ಕಳ್ಳನೀಗ ಆಕೆಯ ಸ್ನೇಹಿತ

ಮುಖಕ್ಕೆ ಗುಂಡು ಹೊಡೆದ ವ್ಯಕ್ತಿಯನ್ನು ಯಾರಾದ್ರೂ ಕ್ಷಮಿಸಲು ಸಾಧ್ಯಾನಾ? ಆದ್ರೆ ಫ್ಲೋರಿಡಾದ ಡೆಬ್ಬೀ ಬೈಗ್ರಿ ಎಂಬ ಮಹಿಳೆ ಮಾತ್ರ ಇಂಥ ದೊಡ್ಡಗುಣವನ್ನು ಹೊಂದಿದ್ದಾಳೆ. 1991ರಲ್ಲಿ ನಡೆದ ಘಟನೆ ಇದು. ಡೆಬ್ಬೀ ಕಾರಿನಲ್ಲಿದ್ದ ವಸ್ತುವನ್ನು ಕಳವು ಮಾಡಲು 13 ವರ್ಷದ ಬಾಲಕನೊಬ್ಬ ಮುಂದಾಗಿದ್ದ.

ತಾನು ಸಿಕ್ಕಿಬೀಳಬಹುದು ಅನ್ನೋ ಭಯದಲ್ಲಿ ತನ್ನ ಬಳಿಯಿದ್ದ ಗನ್ ನಿಂದ ಡೆಬ್ಬೀ ಮುಖಕ್ಕೆ ಗುಂಡು ಹಾರಿಸಿಬಿಟ್ಟಿದ್ದ. ಇಯಾನ್ ಎಂಬ ಆ ಬಾಲಕನಿಗೆ ಜೈಲು ಶಿಕ್ಷೆಯೂ ಆಗಿದೆ. ಆತನ ತಾಯಿ ಕೂಡ ಇಂಥ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ಲು. ಹಾಗಾಗಿ ಚಿಕ್ಕ ವಯಸ್ಸಿನಲ್ಲೇ ಅವನ ಕೈಗೆ ಗನ್ ಕೊಟ್ಟಿದ್ಲು.

ಮಹಿಳೆಯ ಮುಖಕ್ಕೆ ಗುಂಡು ಹಾರಿಸಿದ ಬಾಲಕನ ಮನಸ್ಸಿನಲ್ಲಿ ಪಶ್ಚಾತ್ತಾಪ ಮೂಡಿತ್ತು. ಆತ ಹೇಗೋ ಡೆಬ್ಬೀ ಫೋನ್ ನಂಬರ್ ಸಂಗ್ರಹಿಸಿ ಜೈಲಿನಿಂದ್ಲೇ ಅವಳಿಗೆ ಕರೆ ಮಾಡಿದ್ದ. ಅವನ ಕರೆಯನ್ನು ಸ್ವೀಕರಿಸಿದ ಡೆಬ್ಬಿ, ವಿಶಾಲ ಮನಸ್ಸಿನಿಂದ ಇಯಾನ್ ನನ್ನು ಕ್ಷಮಿಸಿದ್ದಾಳೆ. ಅಷ್ಟೇ ಅಲ್ಲ ಇಬ್ಬರ ಮಧ್ಯೆ ಅನ್ಯೋನ್ಯ ಸ್ನೇಹವೂ ಬೆಳೆದಿದೆ.

ಈ ಕೇಸ್ ನಲ್ಲಿ ಇಯಾನ್ ಗೆ ಜೀವಾವಧಿ ಶಿಕ್ಷೆಯಾಗಿತ್ತು. ಪೆರೋಲ್ ಕೂಡ ಸಿಕ್ಕಿರಲಿಲ್ಲ. ಕೊನೆಗೆ ಖುದ್ದು ಡೆಬ್ಬಿ ಕೋರ್ಟ್ ಗೆ ಬಂದು ಆತನ ಪರವಾಗಿ ಹೇಳಿಕೆ ನೀಡಿದ್ಲು. ಅರಿಯದೇ ಮಾಡಿದ ತಪ್ಪಿಗಾಗಿ ಅವನನ್ನು ಕ್ಷಮಿಸುವಂತೆ ಕೇಳಿಕೊಂಡ್ಲು. ಹಾಗಾಗಿ ಇಯಾನ್ ಗೆ ಜೈಲಿನಿಂದ ಈಗ ಬಿಡುಗಡೆ ಸಿಕ್ಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...