alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಕಪ್ ಮಾಡಿಕೊಂಡಿದ್ದೇ ಮುಳುವಾಯ್ತು ಯುವತಿಗೆ

ಮೇಕಪ್ ಮಾಡಿಕೊಳ್ತಾಳೆ ಅನ್ನೋ ಕಾರಣಕ್ಕೆ ಯುವಕನೊಬ್ಬ ತನ್ನ ಭಾವೀ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. 22 ವರ್ಷದ ಲಾರೆನ್ ರಿಚ್ಮಂಡ್ ಹಲ್ಲೆಗೊಳಗಾದ ಯುವತಿ. ಆಕೆಯ ಭಾವೀ ಪತಿ ಜೋರ್ಡನ್ ಗ್ರೀವ್ಸ್ ಈ ಕೃತ್ಯ ಎಸಗಿದ ಆರೋಪಿ.

ಆತನಿಗೆ ಕೋರ್ಟ್ ನಲ್ಲಿ ಶಿಕ್ಷೆಯಾಗಿದ್ದು, ಲಾರೆನ್ ಮೇಕಪ್ & ಬ್ಯೂಟಿ ಥೆರಪಿ ಕೋರ್ಸ್ ಮುಗಿಸಿ ಅದನ್ನೇ ವೃತ್ತಿಯಾಗಿ ಆಯ್ದುಕೊಂಡಿದ್ದಾಳೆ. ಲಾರೆನ್ ಗೆ ಮೊದಲಿನಿಂದ್ಲೂ ಮೇಕಪ್ ಅಂದ್ರೆ ಇಷ್ಟ. ಹೊಸ ಹೊಸ ಸ್ಟೈಲ್ ಟ್ರೈ ಮಾಡೋದು ಅಭ್ಯಾಸವಾಗಿತ್ತು. ಆದ್ರೆ ಇದೇ ತನಗೆ ಮಾರಕವಾಗಬಹುದು ಅನ್ನೋ ಕಲ್ಪನೆಯೂ ಅವಳಿಗೆ ಇರಲಿಲ್ಲ.

ಲಾರೆನ್ ಹಾಗೂ ಜೋರ್ಡನ್ ವಿವಾಹ ನಿಶ್ಚಯವಾಗಿತ್ತು. ಹಾಗಾಗಿ ಆಕೆ ಭಾವೀ ಪತಿಯ ಆಪಾರ್ಟ್ಮೆಂಟ್ ಗೆ ಶಿಫ್ಟ್ ಆದ್ಲು. ಆಗ ಜೋರ್ಡನ್ ಅಸಲಿಯತ್ತು ಒಂದೊಂದಾಗೇ ಬೆಳಕಿಗೆ ಬಂದ್ವು. ಜೋರ್ಡನ್ ಅನುಮಾನದ ಪಿಶಾಚಿಯಾಗಿದ್ದ. ಯಾವಾಗ್ಲೂ ಲಾರೆನ್ ಮೇಲೆ ಹದ್ದಿನ ಕಣ್ಣಿಡ್ತಾ ಇದ್ದ.

ಕಚೇರಿಗೂ ಫಾಲೋ ಮಾಡಿಕೊಂಡು ಬರುತ್ತಿದ್ದ. ಅಲ್ಲಿ ಪುರುಷ ಗ್ರಾಹಕರನ್ನು ಆಕರ್ಷಿಸಲು ಯತ್ನಿಸುತ್ತಿದ್ದೀಯ ಅಂತೆಲ್ಲಾ ಜಗಳ ತೆಗೆಯುತ್ತಿದ್ದ. ಪರಪುರುಷರನ್ನು ಆಕರ್ಷಿಸಲು  ಲಾರೆನ್ ಮೇಕಪ್ ಮಾಡಿಕೊಳ್ತಾಳೆ ಅನ್ನೋದು ಅವನ ಆರೋಪವಾಗಿತ್ತು.

ಒಮ್ಮೆ ಪಾರ್ಟಿ ಮುಗಿಸಿ ಬರುತ್ತಿದ್ದಾಗ ಕುಡಿದು ಗಾಡಿ ಚಲಾಯಿಸಬೇಡ ಎಂದಿದ್ದಕ್ಕೆ ಲಾರೆನ್ ಮೇಲೆ ತಿರುಗಿ ಬಿದ್ದಿದ್ದಾನೆ. ಆಕೆಯ ತಲೆ, ಮುಖ, ಮೂತಿ ಎನ್ನದೆ ಎಲ್ಲಾ ಕಡೆ ಹೊಡೆದಿದ್ದಾನೆ. ರಕ್ತ ಸುರಿಯುತ್ತಿದ್ರೂ ಜೋರ್ಡನ್ ಸುಮ್ಮನಾಗಿಲ್ಲ. ಹೇಗೋ ಕಾರಿನ ಕಿಟಕಿ ತೆಗೆದು ಸಹಾಯಕ್ಕಾಗಿ ಕೂಗಿಕೊಂಡ ಲಾರೆನ್ ಪ್ರಾಣ ಉಳಿಸಿಕೊಂಡಿದ್ಲು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...