alex Certify
ಕನ್ನಡ ದುನಿಯಾ       Mobile App
       

Kannada Duniya

5 ಮಂದಿ ಅತ್ಯಾಚಾರವೆಸಗಿ ವಿಡಿಯೋ ಮಾಡಿದ್ರೂ ರೇಪ್ ಅಲ್ಲ ಎಂದ ಕೋರ್ಟ್…!

ಸ್ಪೇನ್ ನ ನ್ಯಾಯಾಲಯವೊಂದರ ತೀರ್ಪನ್ನು ವಿರೋಧಿಸಿ ಸಾವಿರಾರು ಜನರು ಪ್ರತಿಭಟನೆಗಿಳಿದಿದ್ದಾರೆ. ಮಾಹಿತಿ ಪ್ರಕಾರ, 18 ವರ್ಷದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಐದು ಮಂದಿ ಅತ್ಯಾಚಾರವೆಸಗಿದ್ದರು. ಪ್ರಸಿದ್ಧ ಬುಲ್ ಉತ್ಸವದ ವೇಳೆ 2 ವರ್ಷಗಳ ಹಿಂದೆ ಈ ಕೃತ್ಯ ನಡೆದಿತ್ತು.

ಸಾಮೂಹಿಕ ಅತ್ಯಾಚಾರವೆಸಗಿದ್ದ ಕಾಮುಕರು ಅದ್ರ ವಿಡಿಯೋ ಮಾಡಿ ವಾಟ್ಸಾಪ್ ಗ್ರೂಪ್ ನಲ್ಲಿ ಹರಿಬಿಟ್ಟಿದ್ದರು. ವಿಡಿಯೋದಲ್ಲಿ ಮಹಿಳೆ ಕಣ್ಣನ್ನು ಮುಚ್ಚಲಾಗಿತ್ತು. ಆಕೆಯಿಂದ ಯಾವುದೇ ವಿರೋಧ ವ್ಯಕ್ತವಾದಂತೆ ಕಾಣ್ತಿರಲಿಲ್ಲ. ನಿರ್ಲಿಪ್ತವಾಗಿದ್ದ ಯುವತಿ ವಿಡಿಯೋ ತೋರಿಸಿದ ಆರೋಪಿ ಪರ ವಕೀಲರು, ಯುವತಿ ಒಪ್ಪಿಗೆ ನಂತ್ರವೇ ಘಟನೆ ನಡೆದಿದೆ ಎಂದು ವಾದ ಮಂಡಿಸಿದ್ದರು.

ಅತ್ಯಾಚಾರದ ನಂತ್ರ ಹುಡುಗಿಯನ್ನು ಆರೋಪಿಗಳು ಹಿಂಬಾಲಿಸಿ ಫೋಟೋ ತೆಗೆದಿದ್ದರು. ಫೋಟೋದಲ್ಲಿ ಹುಡುಗಿ ಯಾವುದೇ ನೋವಿನಲ್ಲಿದ್ದಂತೆ ಕಾಣುತ್ತಿರಲಿಲ್ಲ. ಇದನ್ನೂ ವಕೀಲರು ಕೋರ್ಟ್ ಗೆ ನೀಡಿದ್ದರು. 2 ವರ್ಷಗಳ ವಿಚಾರಣೆ ನಂತ್ರ ಕೋರ್ಟ್ ಇದು ಅತ್ಯಾಚಾರವಲ್ಲವೆಂದು ತೀರ್ಪಿತ್ತಿದೆ.

ಪೀಡಿತೆ ಪರ ವಕೀಲರು 22 ವರ್ಷ ಜೈಲು ಶಿಕ್ಷೆ ನೀಡುವಂತೆ ಬೇಡಿಕೆಯಿಟ್ಟಿದ್ದರು. ಕೋರ್ಟ್ ಅತ್ಯಾಚಾರವಲ್ಲವೆಂದು ತೀರ್ಪು ನೀಡ್ತಿದ್ದಂತೆ ವಿರೋಧ ಜೋರಾಗಿದೆ. ಸ್ಪೇನ್ ನ ಅನೇಕ ಕಡೆ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...