alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಪಾಸ್ಪೋರ್ಟ್ ತೋರಿಸಿ ಬ್ರಿಟನ್ ನಿಂದ ದೆಹಲಿಗೆ ಬಂದ ಮಹಿಳೆ…!

ಭಾರತೀಯ ಮೂಲದ ಮಹಿಳಾ ಉದ್ಯಮಿಯೊಬ್ಬಳು ಪತಿಯ ಪಾಸ್ ಪೋರ್ಟ್ ಹಿಡಿದು ಮ್ಯಾಂಚೆಸ್ಟರ್ನಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾಳೆ. ನವದೆಹಲಿಯಲ್ಲಿ ತಪಾಸಣೆ ವೇಳೆ ಆಕೆ ಪತಿ ಪಾಸ್ಪೋರ್ಟ್ ತಂದಿರುವುದು ಬಹಿರಂಗವಾಗಿದೆ. ಮ್ಯಾಂಚೆಸ್ಟರ್ ನಲ್ಲಾಗಲಿ, ದುಬೈನಲ್ಲಾಗಲಿ ಈಕೆ ಪತಿ ಪಾಸ್ಪೋರ್ಟ್ ಹಿಡಿದು ಬಂದಿದ್ದಾಳೆಂಬುದು ಗೊತ್ತಾಗಲಿಲ್ಲ.

ಪ್ರಕರಣ ಬೆಳಕಿಗೆ ಬಂದ ನಂತ್ರ ಎಮಿರೇಟ್ಸ್ ಏರ್ಲೈನ್ ತನಿಖೆ ಶುರು ಮಾಡಿದೆ. ಮ್ಯಾಂಚೆಸ್ಟರ್ ನ ರಶ್ಹೋಲ್ಮ್ ಪ್ರದೇಶದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವ 55 ವರ್ಷದ ಗೀತಾ ಏಪ್ರಿಲ್ 23ರಂದು ವ್ಯಾಪಾರ ಪ್ರವಾಸ ಕೈಗೊಂಡಿದ್ದರು. ಗೀತಾ ತಪ್ಪಾಗಿ ಪತಿ ಪಾಸ್ಪೋರ್ಟ್ ಹಿಡಿದು ಬಂದಿದ್ದಳು. ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಆಗಲು ಹಾಗೂ ವಿಮಾನದಲ್ಲಿ ಕುಳಿತುಕೊಳ್ಳಲು ಗೀತಾ ಯಶಸ್ವಿಯಾದ್ರು.

ವಿಮಾನ ದುಬೈನಲ್ಲಿ ಕೆಲ ಕಾಲ ತಂಗಿತ್ತು. ಅಲ್ಲಿ ಕೂಡ ಯಾವುದೇ ತಪಾಸಣೆ ವೇಳೆ ಗೀತಾ ತಪ್ಪು ಹೊರಬರಲಿಲ್ಲ. ನವದೆಹಲಿ ವಿಮಾನ ನಿಲ್ದಾಣದಲ್ಲಿ ಭದ್ರತೆ ತಪಾಸಣೆ ವೇಳೆ ಗೀತಾ, ತಪ್ಪು ಪಾಸ್ಪೋರ್ಟ್ ಹಿಡಿದು ಬಂದಿರುವುದು ಬಹಿರಂಗವಾಗಿದೆ.

ಗೀತಾ ಸೂಕ್ತ ಪಾಸ್ಪೋರ್ಟ್ ಒದಗಿಸಲಿ ಎನ್ನುವ ಕಾರಣಕ್ಕೆ ಆಕೆಯನ್ನು ದುಬೈಗೆ ವಾಪಸ್ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಎಮಿರೇಟ್ಸ್ ಏರ್ಲೈನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ತನಿಖೆಗೆ ಆದೇಶ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...