alex Certify
ಕನ್ನಡ ದುನಿಯಾ       Mobile App
       

Kannada Duniya

ಸಬ್ ವೇ ಶೌಚಾಲಯದಲ್ಲಿ ರಕ್ತದ ಕಲೆ- ಜಾಡು ಹಿಡಿದು ಹೊರಟವರಿಗೆ ಸಿಗ್ತು..

subway1

ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಕನಸು. ತನ್ನ ಕರುಳ ಕುಡಿಯನ್ನು ಮುದ್ದಾಡಿದಾಗ ಸಿಗುವ ಸಂತೋಷ ತಾಯಿಗೆ ಮತ್ತೆಂದು ಸಿಗಲಾರದು ಎನ್ನುತ್ತಾರೆ. ಆದ್ರೆ ಅಮೆರಿಕಾದ ಮಹಾತಾಯಿಯೊಬ್ಬಳು ಹೆತ್ತ ಶಿಶುವನ್ನು ಶೌಚಾಲಯದಲ್ಲಿ ಬಿಟ್ಟು ಹೋಗಲು ಮುಂದಾಗಿದ್ದಾಳೆ.

ಘಟನೆ ನಡೆದಿರೋದು ಅಮೆರಿಕಾದ ಲಾಸ್ ಏಂಜಲೀಸ್ ಸಬ್ ವೇ ಒಂದರಲ್ಲಿ. ಶೌಚಾಲಯದಲ್ಲಿ ಹೆರಿಗೆಯಾಗಿದ್ದು, ಮಹಿಳೆ ನವಜಾತ ಶಿಶುವನ್ನು ಶೌಚಾಲಯದ ಕಸದ ಬುಟ್ಟಿಗೆ ಎಸೆದು ಹೋಗಲು ಯತ್ನಿಸಿದ್ದಾಳೆ. ಈ ವೇಳೆ ಶೌಚಾಲಯಕ್ಕೆ ಹೋದವರಿಗೆ ರಕ್ತ ಕಂಡಿದೆ. ಜೊತೆಗೆ ಮಗು ಅಳು ಕೇಳಿಸಿದೆ. ಅವರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ತಾಯಿ ಮೇರಿ ಗ್ರೇಸ್ ಟ್ರಿನಿಡಾಡ್ ಳನ್ನು ಬಂಧಿಸಿದ್ದಾರೆ. ಮಗುವನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ತಾಯಿ ಗ್ರೇಸ್, ಪಕ್ಕದ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಶಿಶು ಹತ್ಯೆ ಯತ್ನ ಪ್ರಕರಣದಲ್ಲಿ ಆಕೆಯನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...