alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಸೆ ಒಡೆದ ವೈನ್ ಗ್ಲಾಸ್ ಗೆ ದುಡ್ಡು ಕೇಳಿದ ಮಾವ…!

ವಿದೇಶಗಳಲ್ಲಿ ಸಂಬಂಧಗಳಿಗೆ ಆದ್ಯತೆ ಕಡಿಮೆ. ಬಾಂಧವ್ಯದ ಬೆಲೆಯೂ ಅವರಿಗೆ ಅಷ್ಟಕ್ಕಷ್ಟೇ. ಇದಕ್ಕೆ ಗರ್ಭಿಣಿಯೊಬ್ಬಳು ಮಾಮ್ಸ್ ನೆಟ್ ಎಂಬ ಆನ್ ಲೈನ್ ವೆಬ್ ಸೈಟ್ ನಲ್ಲಿ ಬರೆದುಕೊಂಡ ಘಟನೆಯೇ ಸಾಕ್ಷಿ.

ಹೌದು….5 ತಿಂಗಳ ಗರ್ಭಿಣಿಯೊಬ್ಬಳು ತನ್ನ ಗಂಡನೊಂದಿಗೆ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದಾಳೆ. ಬೇರೆಯಾಗಿ ವಾಸವಿರುವ ಅತ್ತೆ-ಮಾವನ ಮನೆಗೆ ಒಮ್ಮೆ ಹೋಗಿರುತ್ತಾಳೆ. ಆಗ ಆಕೆಯ ಕೈಯ್ಯಿಂದ ವೈನ್ ಗ್ಲಾಸ್ ಒಂದು ಜಾರಿ ಕೆಳಗೆ ಬಿದ್ದು ಒಡೆದು ಹೋಗಿದೆ. ಆನಂತರ ಆಕೆ ಮನೆಗೆ ಬಂದಿದ್ದಾಳೆ.

ಇದಾದ ಬಳಿಕ ಆಕೆಯ ಮಾವ, ಒಡೆದು ಹೋಗಿದ್ದು ದುಬಾರಿ ಗ್ಲಾಸಾಗಿದ್ದು, ಅದರ ಬೆಲೆ 280 ಯುಎಸ್ ಡಾಲರ್ ವಾಪಾಸ್ ನೀಡುವಂತೆ ಇ ಮೇಲ್ ಮಾಡಿದ್ದಾರೆ.

ಇದನ್ನು ಆಕೆ ಮಾಮ್ಸ್ ನೆಟ್ ಅನ್ನೋ ವೆಬ್ ಸೈಟ್ ನಲ್ಲಿ ಬರೆದುಕೊಂಡಿದ್ದು, ತನ್ನ ಹಾಗೂ ಅತ್ತೆ-ಮಾವನ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ ಮಾವ ತನಗೆ ಹೀಗೆ ಕೇಳಿದ್ದಾನೆ. ನಾನು ದುಡ್ಡನ್ನು ಕೊಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಓದುಗರ ಅಭಿಪ್ರಾಯ ಕೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...