alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿಯಾಗುವಂತಿದೆ ಈ ಮಾಡೆಲ್ ತಲೆ ಸುತ್ತಿ ಬಿದ್ದ ಕಾರಣ

mexiko

ಮೆಕ್ಸಿಕೋ: ಸಾಮಾನ್ಯವಾಗಿ ಇಷ್ಟಪಟ್ಟವರು ಪ್ರಪೋಸ್ ಮಾಡಿದಾಗ, ಖುಷಿಯಿಂದ ಸಂಭ್ರಮಿಸುವ ಯುವತಿಯರ ಬಗ್ಗೆ ಕೇಳಿರುತ್ತೀರಿ.

ಇಲ್ಲೊಬ್ಬ ಮಾಡೆಲ್ ಗೆ ಬಾಯ್ ಫ್ರೆಂಡ್ ಮದುವೆಯಾಗುವೆಯಾ ಎಂದು ಪ್ರೇಮ ನಿವೇದನೆ ಮಾಡಿದ್ದೇ ತಡ ಆಕೆ ತಲೆ ಸುತ್ತಿ ಬಿದ್ದಿದ್ದಾಳೆ. ಮೆಕ್ಸಿಕೋದ ಮಾಡೆಲ್ ರೆಯ್ನಾ ರೆಂಟಿರಿಯಾ ತಲೆ ಸುದ್ದಿ ಬಿದ್ದವಳು. ಈಕೆಯ ಬಾಯ್ ಫ್ರೆಂಡ್ ಬೆನಿಟಿಸ್, ವಿಭಿನ್ನವಾಗಿ ಪ್ರಪೋಸ್ ಮಾಡಬೇಕೆಂದು ಮ್ಯೂಸಿಕ್ ಸಮೇತ ಸಿದ್ಧವಾಗಿದ್ದಾನೆ. ರೆಯ್ನಾ ನಿಗದಿತ ಸ್ಥಳಕ್ಕೆ ಆಗಮಿಸಿದ ಕೂಡಲೇ ಮದುವೆಯಾಗುವೆಯಾ ಎಂದು ಕೇಳಿದ್ದಾನೆ.

ಜೊತೆಗೆ ಉಂಗುರ ತೋರಿಸಲು ಮುಂದಾಗಿದ್ದು, ಇದನ್ನು ಕೇಳಿಯೇ ರೆಯ್ನಾ ತಲೆ ಸುತ್ತಿ ಬಿದ್ದಿದ್ದಾಳೆ. ಬಳಿಕ ಚೇತರಿಸಿಕೊಂಡು ಸಮ್ಮತಿಸಿದ್ದಾಳೆ. ಬೆನಿಟಿಸ್ ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ, ಶಾಕ್ ಆಗಿತ್ತು ಎಂದು ಹೇಳಿಕೊಂಡಿರುವ ರೆಯ್ನಾ, ಸಂತಸ ವ್ಯಕ್ತಪಡಿಸಿದ್ದಾಳೆ. ಆಕೆ ತಲೆ ಸುತ್ತಿ ಬಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...