alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನನ್ನೇ ಗುಂಡಿಟ್ಟು ಕೊಂದಿದ್ದಾಳೆ 92 ವರ್ಷದ ತಾಯಿ

92 ವರ್ಷದ ತಾಯಿ 72 ವರ್ಷದ ಮಗನನ್ನು ಗುಂಡಿಟ್ಟು ಕೊಂದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಪೊಲೀಸರ ಮಾಹಿತಿಯಂತೆ ಮಗ, ತಾಯಿಯನ್ನು ವೃದ್ಧಾಶ್ರಮದಲ್ಲಿ ಇಡಲು ಬಯಸಿದ್ದನೆನ್ನಲಾಗಿದೆ. ಮಗನ ಈ ತೀರ್ಮಾನ ತಾಯಿಯ ಪಿತ್ತವನ್ನು ನೆತ್ತಿಗೇರಿಸಿದೆ. ಅಲ್ಲದೆ ಗುಂಡಿಟ್ಟು ಕೊಲ್ಲುವಂತೆ ಮಾಡಿದೆ.

ಈ ಪ್ರಕರಣ ಮೇರಿಕೋಪಾ ಪ್ರಾಂತ್ಯದ ಫೌಂಟೇನ್ ಹಿಲ್ಸ್ ನಲ್ಲಿ ಜುಲೈ 2 ರಂದು ನಡೆದಿದೆ.
ಮಗನನ್ನು ಕೊಂದ ತಾಯಿ, ನೀನು ನನ್ನ ಜೀವನವನ್ನೇ ನಾಶ ಮಾಡಿದ್ದೀಯಾ, ನಾನು ನಿನ್ನ ಜೀವನ ನಾಶ ಮಾಡುವುದಾಗಿ ತಿಳಿಸಿದ್ದಾಳೆ. ಸಮೀಪವರ್ತಿ ಹೇಳುವಂತೆ, ಅನ್ನಾ ಮೆ ಬ್ಲೆಸ್ಸಿಂಗ್ ಮಗನನ್ನು ಕೊಂದು ತಾನೂ ಶೂಟ್ ಮಾಡಿಕೊಳ್ಳಲು ಮುಂದಾಗಿದ್ದಾಗಿ ತಿಳಿಸಿದ್ದಾರೆ.

ಮೃತ ವ್ಯಕ್ತಿ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಲು ಇಚ್ಛಿಸಿದ್ದ. ತಾಯಿಯೊಂದಿಗೆ ಇರೋದು ಆತನಿಗೆ ಇಷ್ಟವಿರಲಿಲ್ಲವೆಂದು ಹೇಳಲಾಗಿದೆ. ಇನ್ನು ತಾಯಿ, ಮಗನನ್ನು ಕೊಂದು, ಆತನ ಪ್ರಿಯತಮೆಯತ್ತ ಪಿಸ್ತೂಲ್ ತಿರುಗಿಸಿದ್ದಳು. ಆದರೆ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪೊಲೀಸರು ಘಟನಾ ಸ್ಥಳಕ್ಕೆ ಬರುವಷ್ಠರಲ್ಲಿ ಮಗ ಇಹಲೋಕ ತ್ಯಜಿಸಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...