alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ‌ ವಯಸ್ಸಿನ ಯುವತಿಯೊಂದಿಗೆ ಮದುವೆ…!

ಪ್ರೇಮಕ್ಕೆ ಕಣ್ಣಿಲ್ಲ.. ವಯಸ್ಸಿನ ನಿರ್ಬಂಧವಿಲ್ಲ ಎನ್ನತ್ತಾರೆ. ಅದಕ್ಕೆ ತಾಜಾ ಉದಾಹರಣೆ ಎನ್ನುವ ಹಾಗೇ, 54 ವಯಸ್ಸಿನ ವ್ಯಕ್ತಿಯನ್ನು 27 ರ ತರುಣಿ ಮದುವೆಯಾಗಿದ್ದಾಳೆ.

ಹೌದು, ಅಚ್ಚರಿಯಾದರೂ ಇದು ಸತ್ಯ‌ ಘಟನೆ. ಅಮೆರಿಕಾದ ಅರಿಜೋನಾದ 54ರ ಕರ್ನ್ ಲೆಹಮಾನ್ ಎಂಬ ವ್ಯಕ್ತಿಯೊಂದಿಗೆ 27ರ ಟೇಲರ್ ಎನ್ನುವಾಕೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದಾಳೆ.

ಆದರೆ ಕರ್ನ್ ಗೆ 30 ವರ್ಷದ ಅಮಾಂಡ ಎನ್ನುವ‌ ಮಗಳಿದ್ದು, ಆಕೆ ಟೇಲರ್ ನ ಆಪ್ತ ಸ್ನೇಹಿತೆಯಂತೆ. ಮದುವೆ ಬಳಿಕ ಈ ವಿಷಯ ಬಹಿರಂಗವಾಗಿದೆ.

ಕಳೆದ ಐದು ವರ್ಷದ ಹಿಂದೆ ಬಾರ್ ಒಂದರಲ್ಲಿ ಈ ಜೋಡಿ ಪರಿಚಿತವಾಗಿದ್ದು, ಸ್ನೇಹದಿಂದ ಪ್ರೀತಿಗೆ ತಿರುಗಿ ಕಳೆದ ವರ್ಷದ ಹಿಂದೆ ಮದುವೆಯೂ ಆಗಿದೆ. ಆರಂಭದಲ್ಲಿ ಈ ವಿಷಯ ತಿಳಿದ ಸಂಬಂಧಿಗಳು ಶಾಕ್ ಆದರೂ ಬಳಿಕ‌ ಒಪ್ಪಿಕೊಂಡಿದ್ದಾರಂತೆ. ಆರಂಭದಲ್ಲಿ ಟೇಲರ್ ಸ್ನೇಹಿತೆ ಅಮಾಂಡ ಇದನ್ನು ಒಪ್ಪದಿದ್ದರೂ, ಬಳಿಕ ಸದಾ ತನ್ನ ಸ್ನೇಹಿತೆ ತಾಯಿ ಸ್ಥಾನದಲ್ಲಿರುತ್ತಾಳೆಂದು ಖುಷಿಯಿಂದ ಒಪ್ಪಿಕೊಂಡಿದ್ದಾಳೆ ಎಂದು ಕರ್ನ್ ಹೇಳಿದ್ದಾನೆ.

ಮದುವೆ ಬಗ್ಗೆ ಮಾತನಾಡಿರುವ ಕರ್ನ್, ಆರಂಭದಲ್ಲಿ ಈ ಸಂಬಂಧ ಉಳಿಯುವುದಿಲ್ಲ ಎಂದುಕೊಂಡಿದ್ದೆ. ಆದರೆ ನಮ್ಮಬ್ಬಿರ ಆಸಕ್ತಿ ಒಂದೇ ಆಗಿರುವುದರಿಂದ ಯಾವುದೇ ತೊಂದರೆಯಿಲ್ಲ. ಇದೀಗ ಮಗಳು ಹಾಗೂ ಮಡದಿಯೊಂದಿಗೆ ಪ್ರವಾಸ ಮಾಡಿಕೊಂಡು ಮೂವರು ಸಂತಸವಾಗಿದ್ದೇವೆ ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...