alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆಯನ್ನು 15 ವರ್ಷಗಳ ಕಾಲ ಗುಹೆಯಲ್ಲಿ ಬಂಧಿಸಿಟ್ಟು ಅತ್ಯಾಚಾರವೆಸಗಿದ್ದ ಪಾಪಿ

ಚಿಕಿತ್ಸೆ ನೆಪದಲ್ಲಿ ಯುವತಿಯನ್ನು ಕಳೆದ 15 ವರ್ಷಗಳಿಂದ ಗುಹೆಯಲ್ಲಿ ಬಂಧಿಸಿಟ್ಟು, ನಿರಂತರ ಅತ್ಯಾಚಾರ ಎಸಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ವಿಲಕ್ಷಣ ಪ್ರಕರಣವೊಂದು ಇಂಡೋನೇಷ್ಯಾದಲ್ಲಿ ನಡೆದಿದೆ.

ಬಡ ಕುಟುಂಬವೊಂದು ಚಿಕಿತ್ಸೆಗಾಗಿ ತಮ್ಮ‌ 13 ವರ್ಷದ ಮಗಳನ್ನು ವೈದ್ಯರ ಬಳಿ ಕರೆ ತಂದಿದ್ದರು. ಆ ವೈದ್ಯನು ಚಿಕಿತ್ಸೆಗಾಗಿ ಉಳಿಸಿಕೊಂಡು ಪೋಷಕರನ್ನು ಸಾಗ ಹಾಕಿದ್ದನು. ಬಳಿಕ ಆಕೆಯನ್ನು ಪೋಷಕರು ವಿಚಾರಿಸಲು ಬಂದಾಗ, ಆಕೆ ಜಕಾರ್ತಾಗೆ ಹೋಗಿದ್ದಾಳೆ ಎಂದು ಹೇಳಿ ಕಳಿಸಿದ್ದ.

ಆದರೆ ತನ್ನ‌ ಮನೆ ಸಮೀಪದ ಗುಹೆಯಲ್ಲಿ ಬಂಧಿಸಿಟ್ಟಿದ್ದ. ಈಗ ಆಕೆಗೆ 28 ವರ್ಷವಾಗಿದ್ದು, ಕಳೆದ 18 ವರ್ಷಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದಾನೆ.

ಪೊಲೀಸರು ಪ್ರಕರಣ ಬೇಧಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಆತನು ಗೆಳೆಯನ ಆತ್ಮದ ಕತೆಯೊಂದನ್ನು ಕಟ್ಟಿ ಯುವತಿಯನ್ನು ನಂಬಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಎಂದು ತನಿಖಾಧಿಕಾರಿಗಳು ಅಲ್ಲಿನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...