alex Certify
ಕನ್ನಡ ದುನಿಯಾ       Mobile App
       

Kannada Duniya

ಸುಷ್ಮಾ ಸ್ವರಾಜ್ ಗೆ ಇಂಥಾ ಟ್ವೀಟ್ ಮಾಡಿದ್ದಾಳೆ ಪಾಕ್ ಮಹಿಳೆ

sushma

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಾಮಾಜಿಕ ತಾಣಗಳಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಅವರ ಜನಪರ ಕಾಳಜಿ ಹಾಗೂ ಕಾರ್ಯದಕ್ಷತೆ ಬಗ್ಗೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿದೆ. ಕೇವಲ ಭಾರತೀಯರಿಗೆ ಮಾತ್ರವಲ್ಲ, ಪಾಕಿಸ್ತಾನೀಯರಿಗೆ ಕೂಡ ಸುಷ್ಮಾ ಸ್ವರಾಜ್ ಅಚ್ಚುಮೆಚ್ಚು.

ಅದೆಷ್ಟರ ಮಟ್ಟಿಗೆ ಅಂದ್ರೆ ನವಾಜ್ ಷರೀಫ್ ಬದಲು ಸುಷ್ಮಾ ಸ್ವರಾಜ್ ನಮ್ಮ ಪ್ರಧಾನಿಯಾಗಿದ್ರೆ ಚೆನ್ನಾಗಿರುತ್ತಿತ್ತು ಎನ್ನುತ್ತಿದ್ದಾರೆ ಪಾಕ್ ಪ್ರಜೆಗಳು. ಭಾರತದಲ್ಲಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಮಾಡಿಕೊಡುವಂತೆ ಪಾಕಿಸ್ತಾನದ ಮಹಿಳೆಯೊಬ್ಳು ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟ್ಟರ್ ಮೂಲಕ ಮನವಿ ಮಾಡಿಕೊಂಡಿದ್ದಾಳೆ.

ಅಷ್ಟೇ ಅಲ್ಲ ನಿಮ್ಮ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯಿದೆ, ನೀವೇ ಪಾಕಿಸ್ತಾನದ ಪ್ರಧಾನಿಯಾಗಿದ್ರೆ, ಈ ದೇಶ ಬದಲಾಗುತ್ತಿತ್ತು ಅಂತಾ ಟ್ವೀಟ್ ಮಾಡಿದ್ದಾಳೆ. ಹಿಜಾಬ್ ಆಸಿಫ್ ಎಂಬ ಮಹಿಳೆಯ ಮನವಿಗೆ ಇಸ್ಲಾಮಾಬಾದ್ ನಲ್ಲಿರೋ ಭಾರತದ ರಾಯಭಾರ ಕಚೇರಿ ಸ್ಪಂದಿಸಿದೆ. ಶೀಘ್ರದಲ್ಲೇ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...