alex Certify
ಕನ್ನಡ ದುನಿಯಾ       Mobile App
       

Kannada Duniya

ಹೇರ್ ಕಟ್ ಮಾಡಿಸಲು ಹೋದ ಯುವಕನಿಗೆ ಆಗಿದ್ದೇನು…?

ಹೊಸ ಹೊಸ ಹೇರ್ ಸ್ಟೈಲ್ ಮಾಡಿಸಿಕೊಳ್ಳೋ ಕ್ರೇಝ್ ಎಲ್ಲರಿಗೂ ಇರುತ್ತೆ. ಅಮೆರಿಕದ ವಿಸ್ಕನ್ಸಿನ್ ನಗರದ ಯುವಕ ಕೂಡ ಟ್ರೆಂಡಿಯಾಗಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದ. ಕ್ರಿಸ್ಮಸ್ ಗಾಗಿ ಸ್ಟೈಲಿಶ್ ಹೇರ್ ಸ್ಟೈಲ್ ಮಾಡಿಸಲು ಹೋಗಿದ್ದ.

ಆದ್ರೆ ಕೊನೆಗೆ ಕಿವಿಯಿಂದ ರಕ್ತ ಸುರಿಸುತ್ತ, ಪೂರ್ತಿ ಬೋಳಾದ ತಲೆಯೊಂದಿಗೆ ಕ್ಷೌರಿಕನ ಅಂಗಡಿಯಿಂದ ಹೊರ ಬಂದಿದ್ದಾನೆ. ಎರಡೂ ಕಿವಿಗಳ ಪಕ್ಕದಲ್ಲಿ ಕೂದಲನ್ನು ನೀಟಾಗಿ ಬೋಳಿಸಿ, ಮಧ್ಯದಲ್ಲಿ ಉದ್ದ ಕೂದಲು ಬಿಟ್ಟು, ಜೆಲ್ ಹಾಕಿ ಸೆಟ್ ಮಾಡುವಂತೆ ಸೂಚಿಸಿದ್ದ.

ಆದ್ರೆ ಕ್ಷೌರಿಕ ಯುವಕನ ಕಿವಿಗಳನ್ನು ಹಿಡಿದು ಎಳೆದಾಡಿದ್ದಾನಂತೆ. ಅಷ್ಟೇ ಅಲ್ಲ ಕತ್ತರಿಯಲ್ಲಿ ಕಿವಿಯನ್ನು ಒಂಚೂರು ಕತ್ತರಿಸಿ ಹಾಕಿದ್ದಾನೆ. ತಲೆಯ ಮಧ್ಯದಲ್ಲಿ ಮಾತ್ರ ಕೂದಲನ್ನು ಬೋಳಿಸಿ ಇಟ್ಟಿದ್ದಾನೆ. ಸಿಟ್ಟಿಗೆದ್ದ ಯುವಕ, ಕ್ಷೌರಿಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.

ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹೇರ್ ಕಟ್ ಪೂರ್ತಿಯಾಗಿ ಯಡವಟ್ಟಾಗಿದ್ದರಿಂದ ಯುವಕ ಪೂರ್ತಿಯಾಗಿ ತಲೆ ಬೋಳಿಸಿಕೊಂಡಿದ್ದಾನೆ. ಇನ್ನೊಂದೆಡೆ ಸ್ಟೈಲಿಸ್ಟ್ ಮಾತ್ರ ತಾನು ಬೇಕಂತಲೇ ಮಾಡಿದ್ದಲ್ಲ, ಆಕಸ್ಮಿಕವಾಗಿ ಆದ ಪ್ರಮಾದ ಎನ್ನುತ್ತಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...