alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲ ಮಾಡಿಕೊಂಡಿದ್ದ ಸುಂದರಿ ಕೊಟ್ಟಿದ್ದಾಳೆ ಈ ಆಫರ್

tatto

ಬೈಲಿ ಪ್ರೈಸ್ ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ನಗರದ ಸುಂದರ ಯುವತಿ. ವೆಬ್ ಬಳಕೆದಾರರಿಗೆ ಒಂದು ಅಮೋಘವಾದ ಆಫರ್ ಇಟ್ಟಿದ್ದಾಳೆ. ಅವಳ ಪೃಷ್ಠದ ಮೇಲೆ ಟ್ಯಾಟೂ ಸೆಲೆಕ್ಟ್ ಮಾಡುವ ಅವಕಾಶ. ಅದನ್ನೀಗ ಹರಾಜಿಗೆ ಇಟ್ಟಿದ್ದಾಳೆ.

‘ಟ್ರೇಡ್ ಮಿ’ ವೆಬ್ ಸೈಟ್ ನಲ್ಲಿ ತನ್ನ ಪೃಷ್ಠದ 9 ಸೆಮೀX9 ಸೆಮೀ ಜಾಗವನ್ನು ಕ್ಯಾನ್ವಾಸ್ ನಂತೆ ಹರಾಜಿಗೆ ಇಟ್ಟಿದ್ದಾಳೆ. 20 ವರ್ಷದ ಬೈಲಿ ಕೈತುಂಬಾ ಸಾಲ ಮಾಡ್ಕೊಂಡಿದ್ದಾಳಂತೆ, ಸಾಲ ತೀರಿಸಲು ಬೇರೆ ಮಾರ್ಗವಿಲ್ಲದೆ ಈ ಹರಾಜು ಪ್ರಕ್ರಿಯೆ ನಡೆಸ್ತಿದ್ದಾಳೆ.

‘ನಾನೊಬ್ಳು ಸುಂದರಿ, ಹಾಗೂ ವೈಲ್ಡ್ ಗರ್ಲ್,  ನನ್ನ ಬಗ್ಗೆ ತಿಳಿದುಕೊಂಡಿರುವವರಿಗೆ ಇದೊಂದು ವಿಲಕ್ಷಣ ಆಫರ್ ಎನಿಸಿರಲಿಕ್ಕಿಲ್ಲ. ಪೃಷ್ಠದ ಮೇಲೆ ಟ್ಯಾಟೂ ಸೆಲೆಕ್ಷನ್ ಅನ್ನೇ ನಾನು ಹರಾಜಿಗಿಟ್ಟಿರುವ ಬಗ್ಗೆ ಅಷ್ಟೊಂದು ಅಚ್ಚರಿಯಾಗಿಲ್ಲ’ ಅಂತಾ ಬೈಲಿ ಹೇಳಿದ್ದಾಳೆ.

ಅಕಸ್ಮಾತ್ ಈ ಬಿಡ್ಡಿಂಗ್ ನಲ್ಲಿ ಗೆಲುವು ಸಾಧಿಸಿದವರು ವೆಲ್ಲಿಂಗ್ಟನ್ ನವರೇ ಆದಲ್ಲಿ ಆಕೆಗೆ ಟ್ಯಾಟೂ ಹಾಕುವುದನ್ನು ನೋಡುವ ಅವಕಾಶ ಕೂಡ ಸಿಗಲಿದೆ. ಟ್ಯಾಟೂ ಹಾಕಿ ಆದ್ಮೇಲೆ ಅದರೊಂದಿಗೆ ಫೋಟೋ ಕೂಡ ತೆಗೆದುಕೊಳ್ಳಬಹುದು. ಹಲವರು ಈಗಾಗ್ಲೇ ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಮಾಡಿದ್ದಾರೆ, ಅತ್ಯಂತ ಹೆಚ್ಚು ಅಂದ್ರೆ 2,600 ಡಾಲರ್ ಗೆ ಬಿಡ್ಡಿಂಗ್ ನಡೆದಿದೆ. ಡಿಸೆಂಬರ್ 14ರವರೆಗೂ ಹರಾಜು ಪ್ರಕ್ರಿಯೆ ನಡೆಯಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...