alex Certify
ಕನ್ನಡ ದುನಿಯಾ       Mobile App
       

Kannada Duniya

ಕಲ್ಲು ಹೃದಯವನ್ನೂ ಕರಗಿಸುತ್ತದೆ ಈ ದೃಶ್ಯ

cubsವನ್ಯ ಜೀವಿಗಳ ಕಳ್ಳ ಸಾಗಾಣೆ ವಿಶ್ವದಾದ್ಯಂತ ಅವ್ಯಾಹತವಾಗಿ ನಡೆಯುತ್ತಿದೆ. ಅವುಗಳ ಮಾಂಸ ಹಾಗೂ ಅಂಗಾಂಗಳಿಗೆ ಬಹು ಬೇಡಿಕೆ ಇದ್ದು, ಈ ಕಾರಣಕ್ಕಾಗಿ ಅವುಗಳ ಬೇಟೆಯಾಡಿ ಮಾರಾಟ ಮಾಡಲಾಗುತ್ತಿದೆ.

ವಿಯಟ್ನಾಂ ನ ನಮ್ದಿನ್ ಪ್ರಾಂತ್ಯದಲ್ಲಿ 26 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ತಪಾಸಣೆ ನಡೆಸಿದ ವೇಳೆ ಬೆಚ್ಚಿ ಬಿದ್ದಿದ್ದಾರೆ. ನಾಲ್ಕು ಹುಲಿ ಮರಿಗಳು ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪೆಟ್ಟಿಗೆಯಲ್ಲಿ ಕಂಡು ಬಂದಿದ್ದು, 60 ಪೌಂಡ್ ಗಳಿಗೆ ಇದನ್ನು ಖರೀದಿಸಿದ್ದ ಆತ, ಮತ್ತೊಬ್ಬನಿಗೆ 250 ಪೌಂಡ್ ಗಳಿಗೆ ಮಾರಾಟ ಮಾಡಲು ಮುಂದಾಗಿದ್ದನೆನ್ನಲಾಗಿದೆ.

ವಿಯಟ್ನಾಂನಲ್ಲಿ ಆನೇಕ ತಂಡಗಳು ವನ್ಯಜೀವಿಗಳ ಅಕ್ರಮ ಸಾಗಾಣಿಕೆಯಲ್ಲಿ ತೊಡಗಿಕೊಂಡಿವೆ ಎನ್ನಲಾಗಿದ್ದು, ಗ್ರಾಹಕರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸುತ್ತಿದ್ದಾರೆಂದು ಹೇಳಲಾಗಿದೆ. ಎಷ್ಟೇ ಬಿಗಿ ಕ್ರಮಗಳನ್ನು ಕೈಗೊಂಡರೂ ಬೇರೆ ಬೇರೆ ಮಾರ್ಗಗಳಲ್ಲಿ ವನ್ಯ ಜೀವಿಗಳ ಕಳ್ಳ ಸಾಗಾಣಿಕೆ ಅವ್ಯಾಹತವಾಗಿ ಸಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...