alex Certify
ಕನ್ನಡ ದುನಿಯಾ       Mobile App
       

Kannada Duniya

ಜಪಾನ್ ಶಾಲೆಯಲ್ಲಿ ಕಾಡುಹಂದಿಗಳ ‘ದಾಂಧಲೆ’…!

ಜಪಾನ್ ನ ಶಾಲೆಯೊಂದರಲ್ಲಿ ಎರಡು ಕಾಡು ಹಂದಿಗಳು ದಾಂಧಲೆ ನಡೆಸಿವೆ. ತರಗತಿಗೆ ನುಗ್ಗಿದ್ದಲ್ಲದೆ, ಶಾಲೆಯ ಈಜುಕೊಳದಲ್ಲೂ ಮುಳುಗೆದ್ದಿವೆ. ಎರಡೂ ಹಂದಿಗಳು ನೇರವಾಗಿ ಶಾಲೆಯೊಳಕ್ಕೆ ಬಂದಿವೆ. ಹಾಗೇ ಒಂದು ಸುತ್ತು ಈಜುಕೊಳದಲ್ಲಿ ಮುಳುಗೆದ್ದಿವೆ. ಒಂದು ಹಂದಿ ತರಗತಿಗೆ ಎಂಟ್ರಿ ಕೊಟ್ಟಿದೆ.

ಇನ್ನೊಂದು ಹಂದಿ ಈಜುಕೊಳದಲ್ಲೇ ಇತ್ತು. ವಿದ್ಯಾರ್ಥಿಗಳಿಗೆಲ್ಲ ಮಧ್ಯ ವಾರ್ಷಿಕ ಪರೀಕ್ಷೆ ಕೂಡ ನಡೆಯುತ್ತಿತ್ತು. ಆದ್ರೆ ಹಂದಿಗಳಿಗೆ ಅದರ ಪರಿವೆ ಇರಲಿಲ್ಲ. ದಿಢೀರ್ ಅತಿಥಿಗಳ ಪ್ರವೇಶದಿಂದಾಗಿ ಕೆಲಕಾಲ ಪರೀಕ್ಷೆ ಸ್ಥಗಿತಗೊಳಿಸಲಾಯ್ತು.

ನಂತರ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಂದುವರಿಸಲಾಗಿದೆ. ಈಜುಕೊಳದಲ್ಲಿದ್ದ ಹಂದಿಯನ್ನು ನೋಡಲು ಶಾಲೆಯ ಸುತ್ತ ಜನರು ಜಮಾಯಿಸಿದ್ದರು. ಇತ್ತ ತರಗತಿಯೊಳಗೆ ಬಂದಿದ್ದ ಹಂದಿ ಹೊರಹೋಗಲು ದಾರಿ ಕಾಣದೆ ಕಂಗಾಲಾಗಿತ್ತು.

ಹೊರಕ್ಕೆ ಓಡುವ ಧಾವಂತದಲ್ಲಿ ಒಂದೆರಡು ಬಾರಿ ಗಾಜಿನ ಬಾಗಿಲು ಮತ್ತು ಕಿಟಕಿಗೆ ಕೂಡ ಡಿಕ್ಕಿ ಹೊಡೆದಿದೆ. ಸಾಕಷ್ಟು ಕಸರತ್ತು ನಡೆಸಿ ಹಂದಿಗಳನ್ನು ಹಿಡಿಯಲಾಗಿದೆ. ಸ್ಟೇನ್ ಗನ್ ಗಳನ್ನು ಬಳಸಿದ್ದರಿಂದ ಗಾಯಗೊಂಡಿದ್ದ ಅವು ಮೃತಪಟ್ಟಿವೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...