alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳನ್ನು ಕಳೆದುಕೊಂಡ ನೋವಿನಲ್ಲೂ ಗಂಡನಿಗೆ ಕೊಟ್ಲು ಗಿಫ್ಟ್

ಹುಟ್ಟುವಾಗಲೇ ಸಾವನ್ನಪ್ಪಿದ ಮೂರು ಕರುಳ ಕುಡಿಗಳಿಗೆ ತಂದೆತಾಯಿ ಸುಂದರ ಹಾಗೂ ಖುಷಿ ಕೊಡುವಂತಹ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಸುಂದರ ಫ್ಯಾಮಿಲಿ ಫೋಟೋ ಮೂಲಕ ಆತ್ಮಕ್ಕೆ ಶಾಂತಿ ಕೋರಿದ್ದಾರೆ

ಟೆಕ್ಸಾಸ್ ನಲ್ಲಿ ವಾಸಿಸುವ ಲಾರಾ ಮೆಕ್ಬ್ರೈಡ್ ಹಾಗೂ ಟೋನಿಗೆ ಹುಟ್ಟಿದ ಮೂರು ಮಕ್ಕಳು ಬಹಳ ವರ್ಷಗಳ ಹಿಂದೆಯೇ ಸಾವನ್ನಪ್ಪಿವೆ. ಆದ್ರೆ ಮೂವರನ್ನೂ ಕಳೆದುಕೊಂಡಿರುವ ಪಾಲಕರು ಅವರನ್ನು ವಿಭಿನ್ನ ರೀತಿಯಲ್ಲಿ ನೆನೆದಿದ್ದಾರೆ.

ಲಾರಾ ಛಾಯಾಚಿತ್ರಗ್ರಾಹಕ ಬ್ರಾಂಡಿ ಏಂಜೆಲ್ ಸಹಾಯದಿಂದ ಫೋಟೋವನ್ನು ಸಿದ್ಧಪಡಿಸಿದ್ದಾಳೆ. ಫೋಟೋದಲ್ಲಿ ಲಾರಾ ಹಾಗೂ ಟೋನಿ ಅಕ್ಕ ಪಕ್ಕ ಮೂವರು ಮಕ್ಕಳು ನಡೆಯುತ್ತಿದ್ದಾರೆ. ಆದ್ರೆ ಮಕ್ಕಳು ಸ್ಪಷ್ಟವಾಗಿಲ್ಲ. ಅವರ ನೆರಳು ಮಾತ್ರ ಇದೆ. ಲಾರಾ ತನ್ನ ಪತಿಗೆ ಗಿಫ್ಟ್ ಆಗಿ ಇದನ್ನು ನೀಡಿದ್ದಾಳೆ.

ಲೇಖನವೊಂದರ ಮೂಲಕ ಫೋಟೋವನ್ನು ಹೀಗೂ ಸಿದ್ಧಪಡಿಸಬಹುದೆನ್ನುವ ಬಗ್ಗೆ ಲಾರಾ ತಿಳಿದುಕೊಂಡಿದ್ದಳಂತೆ. ಪತಿಗೆ ಇದೊಂದು ಸಾಮಾನ್ಯ ಫೋಟೋ ಶೂಟ್ ಎಂದು ನಂಬಿಸಿ ಫೋಟೋ ತೆಗೆಸಿದ್ದಳಂತೆ. ನನ್ನ ಮಕ್ಕಳು ದೈಹಿಕವಾಗಿ ನನ್ನ ಜೊತೆ ಇಲ್ಲ, ಆದ್ರೆ ಪ್ರತಿ ದಿನ ನನ್ನ ಜೊತೆಗಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಲಾರಾ ಹೇಳಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...