alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಿಂದ ಬಂದ ಗಂಡನನ್ನು ಮತ್ತೆ ಜೈಲಿಗಟ್ಟಿದ್ಲು ಹೆಂಡತಿ…!

ಅಮೆರಿಕದ ಕೊಲರಾಡೋದಲ್ಲಿ ಎಂತಾ ವಿಚಿತ್ರವಾದ ಘಟನೆ ನಡೆದಿದೆ ಅಂದ್ರೆ ಅಕಸ್ಮಾತ್​ ಆಗಿ ಜೈಲಿನಿಂದ ಬಿಡುಗಡೆಯಾದವನ ಖುಷಿ ಎರಡೇ ಗಂಟೆಯಲ್ಲಿ ಹಾಳಾಗಿದೆ. ಅದು ಅವನ ಹೆಂಡತಿಯಿಂದಲೇ..!

ಜೇಮ್ಸ್ ರೇನರ್ಸನ್ ಮೆಸ್ಸಾ ಕೌಂಟಿ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದ. ಅವನಿದ್ದ ಸೆಲ್​ನಲ್ಲಿ ಮರ್ವಿನ್ ಮಾರ್ಚ್​ ಅನ್ನೋ ಮತ್ತೊಬ್ಬ ವ್ಯಕ್ತಿಯೂ ಇದ್ದ. ಆತನನ್ನ ಈ ಹಿಂದೆಯೇ ಬೇರೊಂದು ಜೈಲಿಗೆ ಶಿಫ್ಟ್ ಮಾಡಿದ್ರೂ ಜೈಲು ಸಿಬ್ಬಂದಿ ಆ ಬಗ್ಗೆ ದಾಖಲೆಗಳನ್ನ ಸಿದ್ಧಪಡಿಸಿರಲಿಲ್ಲ.

ಇದರ ನಡುವೆ ಮರ್ವಿನ್ ಮಾರ್ಚ್​ ಬಿಡುಗಡೆಗೆ ನ್ಯಾಯಾಲಯದಿಂದ ಆದೇಶ ಜಾರಿಯಾಯ್ತು. ಆಗ ಜೈಲು ಸಿಬ್ಬಂದಿ ಜೇಮ್ಸ್​ ರೇನರ್ಸ್​ನ್ ​ನನ್ನೇ ಮರ್ವಿನ್ ಮಾರ್ಚ್​ ಅಂದುಕೊಂಡು ಬಿಡುಗಡೆ ಮಾಡಿಬಿಟ್ಟರು. ಆತನ ಕೈಲಿದ್ದ ಖೈದಿಗಳ ರಿಸ್ಟ್ ​ಬ್ಯಾಂಡ್ ಮತ್ತಾತನ ಚಿತ್ರವನ್ನು ಕೂಡ ಪೊಲೀಸರು ಪರಿಶೀಲನೆ ನಡೆಸುವ ಗೋಜಿಗೆ ಹೋಗಲಿಲ್ಲ.

ತನ್ನ ಅದೃಷ್ಟ ಚೆನ್ನಾಗಿದೆ ಅಂದುಕೊಂಡು ಜೈಲಿನಿಂದ ಹೊರಬಂದ ಜೇಮ್ಸ್​ ಕೂಡಲೇ ಮನೆಯ ಕಡೆ ಹೆಜ್ಜೆ ಹಾಕಿದ್ದ. ತನ್ನ ಗಂಡನನ್ನ ಮನೆಯ ಸಮೀಪದಲ್ಲಿ ನೋಡ್ತಿದ್ದ ಹಾಗೆ ಪತ್ನಿ ನಡೆದ ವಿಚಾರ ಏನು ಅನ್ನೋದನ್ನ ತಿಳಿದುಕೊಂಡಿದ್ದಾಳೆ.

ನಂತರ ಹಿಂದು ಮುಂದು ನೋಡದೆ ತನ್ನ ಗಂಡನನ್ನು ವಾಪಸ್ಸು ಜೈಲಿಗೆ ಕರೆತಂದು ಸಿಬ್ಬಂದಿಗೆ ಎಲ್ಲವನ್ನು ವಿವರಿಸಿದ್ದಾಳೆ. ಜೇಮ್ಸ್ ಪತ್ನಿಯ ಪ್ರಾಮಾಣಿಕತೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಜೇಮ್ಸ್ ಬಿಡುಗಡೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಜೈಲು ಸಿಬ್ಬಂದಿ ತಮ್ಮ ಕೆಲಸಕ್ಕೆ ಕುತ್ತು ಬರುವ ಆತಂಕದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...