alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಧಾರಣೆಗೆ ಪತಿ ಬದಲಿಗೆ ಪ್ರೇಮಿಯ ವೀರ್ಯ ನೀಡಿದ್ಲು ಪತ್ನಿ…!

ಗರ್ಭಧಾರಣೆಗಾಗಿ ವಿಶ್ವದಾದ್ಯಂತ ಐವಿಎಫ್ ತಂತ್ರಜ್ಞಾನವನ್ನು ಬಳಸಲಾಗ್ತಿದೆ. ಈ ತಂತ್ರಜ್ಞಾನ ಕೆಲವರಿಗೆ ಫಲ ನೀಡಿದ್ರೆ ಮತ್ತೆ ಕೆಲವರಿಗೆ ಸಮಸ್ಯೆಯಾಗ್ತಿದೆ. ರಷ್ಯಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.

ಮಾಸ್ಕೋದ ಮಹಿಳೆಯೊಬ್ಬಳು ತನ್ನ ಪತಿ ವೀರ್ಯದ ಬದಲು ಬಾಯ್ ಫ್ರೆಂಡ್ ವೀರ್ಯವನ್ನು ಬಳಸಿದ್ದಾಳೆ. ಬಾಯ್ ಫ್ರೆಂಡ್ ವೀರ್ಯ ಬಳಸಿ ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಿಣಿಯಾಗಿದ್ದಾಳೆ. ಮಹಿಳೆಯೇ ಈ ವಿಷ್ಯವನ್ನು ಒಪ್ಪಿಕೊಂಡಿದ್ದಾಳೆ. ಮಗು ಜನಿಸಿ ಒಂದು ವರ್ಷವಾದ್ಮೇಲೆ ಈ ವಿಷ್ಯ ಬಹಿರಂಗವಾಗಿದೆ. ಪತಿ-ಪತ್ನಿ ಮಧ್ಯೆ ಸಂಬಂಧ ಹಳಸಿದ ಮೇಲೆ ಪತ್ನಿಯೇ ಇದನ್ನು ಹೊರ ಹಾಕಿದ್ದಾಳೆ.

ಕುಲಕೋವಾ ಮೆಡಿಕಲ್ ಸೆಂಟರ್ ವಿರುದ್ಧ ಪತಿ ದೂರು ದಾಖಲಿಸಿದ್ದಾನೆ. ವಿಚಾರಣೆ ನಡೆಸಿದ ಕೋರ್ಟ್ ಆಸ್ಪತ್ರೆಗೆ 4.2 ಲಕ್ಷ ರೂ. ದಂಡ ವಿಧಿಸಿದೆ. ಪತಿ, ಪತ್ನಿಯನ್ನು ಶೇಕಡಾ 100ರಷ್ಟು ನಂಬಿದ್ದನಂತೆ. ಆದ್ರೆ ತನಗೆ ಮೋಸವಾಗಿದೆ. ಆಸ್ಪತ್ರೆ ಹಾಗೂ ಪತ್ನಿ ಇಬ್ಬರೂ ಮೋಸ ಮಾಡಿದ್ದಾರೆ. ನಂಬಿಕೆಗೆ ಧಕ್ಕೆಯುಂಟಾಗಿದೆ. ಹೆರಿಗೆ ಖರ್ಚನ್ನು ನಾನು ನೀಡಿದ್ದು, ನನಗೆ ಪರಿಹಾರ ನೀಡುವಂತೆ ಪತಿ ಕೋರ್ಟ್ ಮೊರೆ ಹೋಗಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...